ಕೊನೆಗೂ ಕೇರಳದ ಅರ್ಜುನ್ ನ ಲಾರಿ, ಮೃತದೇಹ ಪತ್ತೆ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿಯನ್ನು ಕೊನೆಗೂ ಮೇಲೆತ್ತಲಾಗಿದ್ದು, ಲಾರಿಯಲ್ಲಿ ಚಾಲಕ ಅರ್ಜುನ್ ನ ಮೃತದೇಹ ಪತ್ತೆಯಾಗಿದೆ.
ಲಾರಿ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದ್ದು, ಘಟನೆಯ ಭೀಕರತೆಯನ್ನು ಎತ್ತಿ ತೋರಿಸುವಂತಿದೆ. ಶಿರೂರು ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಚಾಲಕ ಸಿಲುಕಿದ ವಿಚಾರ ಕೇರಳದಲ್ಲಿ ಭಾರೀ ದೊಡ್ಡ ಸುದ್ದಿಯೇ ಆಗಿತ್ತು. ಕರ್ನಾಟಕದಲ್ಲಿ ಮೊದಲು ಮಹಾನಾಯಕ ನ್ಯೂಸ್ ಈ ಘಟನೆಯ ಬಗ್ಗೆ ಗಮನ ಸೆಳೆದಿತ್ತು.
ಕೇರಳದ ಲಾರಿ ಚಾಲಕನಿಗಾಗಿ ಅಂದು ಮಾಧ್ಯಮಗಳ ಒತ್ತಡ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಂಡಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಲಾರಿಯನ್ನು ಹಾಗೂ ಚಾಲಕನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಘಟನೆ ನಡೆದು 71 ದಿನಗಳ ಬಳಿಕ ಇದೀಗ ಲಾರಿಯ ಕ್ಯಾಬಿನ್ ಪತ್ತೆಯಾಗಿದೆ. ಹಾಗೆಯೇ ಕ್ಯಾಬಿನ್ ನಲ್ಲಿ ಮೃತದೇಹ ಪತ್ತೆಯಾಗಿದೆ ಅಂತ ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: