ದಿಲ್ಲಿಯಲ್ಲಿ 3 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: 35 ಬಾಲಕಿಯರ ರಕ್ಷಣೆ - Mahanayaka
4:02 PM Saturday 21 - September 2024

ದಿಲ್ಲಿಯಲ್ಲಿ 3 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: 35 ಬಾಲಕಿಯರ ರಕ್ಷಣೆ

27/09/2023

ದೆಹಲಿಯ ಮುಖರ್ಜಿ ನಗರದಲ್ಲಿರುವ ಬಾಲಕಿಯರ ಪೇಯಿಂಗ್ ಗೆಸ್ಟ್ ಸೌಲಭ್ಯದಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದೊಳಗೆ ಸಿಲುಕಿದ್ದ ಸುಮಾರು 35 ಬಾಲಕಿಯರನ್ನು ರಕ್ಷಿಸಲಾಗಿದೆ. ಸಂಜೆ 7:45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಒಟ್ಟು 20 ಅಗ್ನಿಶಾಮಕ ಟೆಂಡರ್ ಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ರಾತ್ರಿ 9:30 ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಸುಮಾರು 35 ಮಂದಿ ಹುಡುಗಿಯರು ಇಲ್ಲಿದ್ದರು. ಇವರೆಲ್ಲರೂ ಸುರಕ್ಷಿತವಾಗಿದ್ದಾರೆ. ಮೆಟ್ಟಿಲುಗಳ ಬಳಿ ಆಳವಡಿಸಲಾದ ಮೀಟರ್ ಬೋರ್ಡ್ ನಿಂದ ಬೆಂಕಿ ಕಾಣಿಸಿಕೊಂಡು ಮೇಲಿನ ಮಹಡಿಗಳಿಗೆ ಹರಡಿದೆ. ಈ ಕಟ್ಟಡದಲ್ಲಿ ಕೇವಲ 1 ಮೆಟ್ಟಿಲುಗಳಿತ್ತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಬಾಲಕಿಯರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡದ ಘಟನೆಯ ನಂತರ ಈ ಪ್ರದೇಶದಲ್ಲಿ ದೊಡ್ಡ ಜನಸಮೂಹವೇ ಜಮಾಯಿಸಿತ್ತು. ಬೆಂಕಿಯ ಕಾರಣ ಮತ್ತು ಹಾನಿಯ ಪ್ರಮಾಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆರಂಭಿಕ ಮೌಲ್ಯಮಾಪನದ ಪ್ರಕಾರ, ಕಟ್ಟಡದಲ್ಲಿ ಅಗ್ನಿ-ಸುರಕ್ಷತಾ ಕ್ರಮಗಳ ಕೊರತೆ ಕಂಡುಬಂದಿದೆ.


Provided by

ಈ ವರ್ಷದ ಜುಲೈನಲ್ಲಿ ಇದೇ ಪ್ರದೇಶದ ಕೋಚಿಂಗ್ ಸೆಂಟರ್ ಬಲ್ಲಿ ದೊಡ್ಡ ಬೆಂಕಿ ಘಟನೆ ಸಂಭವಿಸಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳು ಕಿಟಕಿಯಿಂದ ಇಳಿದು ಕಟ್ಟಡವನ್ನು ಖಾಲಿ ಮಾಡಬೇಕಾಯಿತು.

ಇತ್ತೀಚಿನ ಸುದ್ದಿ