ಮೊಬೈಲ್ ಗೇಮ್ ಆಡಿ ಮಾನಸಿಕ ರೋಗಿಯಾದ ವಿದ್ಯಾರ್ಥಿ: ಪ್ರಜ್ಞೆ ತಪ್ಪಿದರೂ ನಿಲ್ಲದ ಗೇಮ್

student hospitalized
11/04/2022

ತಮಿಳುನಾಡು: ಗಂಟೆಗಟ್ಟಲೆ ಮೊಬೈಲ್ ನಲ್ಲಿ ಫೈರ್ ಗೇಮ್ ಆಡಿದ ವಿದ್ಯಾರ್ಥಿಯೊಬ್ಬ ಮಾನಸಿಕ ಅಸ್ವಸ್ಥನಾಗಿ ಆಸ್ಪತ್ರೆ ಸೇರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಈ ಘಟನೆ ನಡೆದಿದೆ. ಹುಡುಗ ತನ್ನ ಫೋನ್‌ನಲ್ಲಿ ಗೇಮ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಬೆರಳುಗಳನ್ನು ಗನ್ ನಂತೆ ತೋರಿಸಿ ಫೈರ್ ಮಾಡುವಂತೆ ಯುವಕ ತೋರಿಸುತ್ತಿದ್ದಾನೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಪೋಷಕರನ್ನು ಬೆಚ್ಚಿ ಬೀಳಿಸಿದೆ.

ಸಾಂಕ್ರಾಮಿಕ ರೋಗ ಕೊವಿಡ್ 19 ವೇಳೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿದ್ದವು. ಈ ವೇಳೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳ ಕೈಗೆ ಮೊಬೈಲ್ ಸಿಕ್ಕಿದೆ. ಮಕ್ಕಳು ಮೊಬೈಲ್ ನ್ನು ವಿದ್ಯಾಭ್ಯಾಸಕ್ಕೆ ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟು, ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆತಂಕದ ಮಾತುಗಳು ಕೇಳಿ ಬಂದಿವೆ.

ವಿಡಿಯೋಗೇಮ್ ಗಳು ಮಕ್ಕಳ ಮನಸ್ಸನ್ನು ಹಾನಿ ಮಾಡುತ್ತಿದ್ದು, ಮೊಬೈಲ್ ಹಿಡಿದು ಮಕ್ಕಳು ಗಂಟೆಗಟ್ಟಲೆ ಕುಳಿತುಕೊಳ್ಳುತ್ತಿದ್ದು, ಇದರಿಂದಾಗಿ ಮಕ್ಕಳ ಮನಸ್ಸಿಗೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಮ್ ವ್ಯಾಪಾರಿಯ ಮೇಲೆ ದಾಳಿ ಪ್ರಕರಣ: ಓರ್ವ ಕಿಡಿಗೇಡಿಯ ಬಂಧನ

ಇಂಧನ ಬೆಲೆ ಏರಿಕೆ: ವಿಮಾನದಲ್ಲಿ ಸ್ಮೃತಿ ಇರಾನಿ, ಕಾಂಗ್ರೆಸ್ ನಾಯಕ ನಡುವೆ ಜಟಾಪಟಿ

ತಂದೆ ತಾಯಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಂದ ಪಾಪಿ ಪುತ್ರ!

ಶ್ರೀಲಂಕಾ ಆರ್ಥಿಕ ದುಸ್ಥಿತಿ: ಭಾರತಕ್ಕೆ ಮತ್ತೆ ವಲಸೆ ಬಂದ 19 ಜನರು

ಶ್ರೀರಾಮನವಮಿ: ಕಲ್ಲು ತೂರಾಟ ಹಿನ್ನೆಲೆಯಲ್ಲಿ ಶೋಭಾಯಾತ್ರೆ ರದ್ದು

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version