ವೀರಪ್ಪನ್ ಕಾಡಲ್ಲಿ ಗುಂಡಿನ ಮೊರೆತ: ಓರ್ವನ ಮೃತದೇಹ ಪತ್ತೆ!
ಚಾಮರಾಜನಗರ: ಪಾಲಾರ್ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, 14 ರ ರಾತ್ರಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಪರಾರಿಯಾಗಿದ್ದ ಬೇಟೆಗಾರ ಎಂಬ ಶಂಕೆ ವ್ಯಕ್ತವಾಗಿದೆ.
ತಮಿಳುನಾಡಿನ ಗೋವಿಂದಪಾಡಿ ಗ್ರಾಮದ ರಾಜ(45) ಮೃತ ವ್ಯಕ್ತಿ. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿನ ಪಾಲರ್ ಚೆಕ್ ಪೋಸ್ಟ್ ಸಮೀಪದ ಅಡಿ ಪಾಲರ್ ಎಂಬಲ್ಲಿ ಈತನ ಶವ ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಮಿಳುನಾಡು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರಾಜನ ಶವ ಪತ್ತೆಯಾಗಿದ್ದು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದು ತಮಿಳುನಾಡಿನ ವೆಲ್ಲಿತಿರುಪ್ಪೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪರಾರಿಯಾಗುವಾಗ ಕಾಲಿಗೆ ಪೆಟ್ಟು: ಬೇಟೆಗಾರರು ಸಾಮಾನ್ಯವಾಗಿ ನುರಿತ ಈಜುಪಟುಗಳಾಗಿದ್ದು ಪರಾರಿಯಾಗುವಾಗ ಕಾಲಿಗೆ ಗುಂಡು ಬಿದ್ದು ಇಲ್ಲವೇ ಕಾಲಿಗೆ ಬೇರೆ ರೀತಿಯಲ್ಲಿ ಗಾಯಗೊಂಡು ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿರಬಹುದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ, ಘಟನೆ ಸಂಬಂಧ ಕೆಲವರ ವಿಚಾರಣೆಯನ್ನು ಮಾಡಲಾಗಿದೆ ಎಂದು ತಮಿಳುನಾಡಿನ ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ತಿಳಿಸಿದ್ದಾರೆ.
ಜಿಂಕೆ ಕಳೇಬರ ಸುಟ್ಟ ಅರಣ್ಯ ಇಲಾಖೆ: ಗುಂಡಿನ ಚಕಮಕಿ ನಡೆದ ಬಳಿಕ ನದಿ ದಡದಲ್ಲಿ ಸಿಕ್ಕಿದ್ದ ಎರಡು ಜಿಂಕೆ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಕಾಡಿನಲ್ಲಿ ಸುಟ್ಟಿದ್ದಾರೆ. ಗುಂಡಿನ ಚಕಮಕಿ ಸಂಬಂಧ ಈಗಾಗಲೇ ಮಲೆಮಹದೇಶ್ವರ ಬೆಟ್ಟದಲ್ಲಿ ನಾಲ್ವರ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾವು ಭೇಟಿ ಕೊಟ್ಟಿಲ್ಲ: ಶವ ಸಿಕ್ಕ ಘಟನೆಗೆ ಸಂಬಂಧಪಟ್ಟಂತೆ ಮಲೆಮಹದೇಶ್ವರ ಬೆಟ್ಟ ಪಿಐ ಪ್ರತಿಕ್ರಿಯಿಸಿದ್ದು ತಮಿಳುನಾಡು ಪೊಲೀಸರ ವ್ಯಾಪ್ತಿಯಲ್ಲಿ ಶವ ಸಿಕ್ಕಿದ್ದು ತಾವು ಭೇಟಿ ಕೊಟ್ಟಿಲ್ಲ, ಪ್ರಕರಣದ ತನಿಖೆ ಬಗ್ಗೆ ಹೆಚ್ಚು ಹೇಳಲಾಗಲ್ಲ ಎಂದಿದ್ದಾರೆ.
ಒಂದು ಕಾಲದಲ್ಲಿ ವೀರಪ್ಪನ್ ಅಟ್ಟಹಾಸ ಮೆರೆದು ಮಣ್ಣಾಗಿ ಹೋದ ಪ್ರದೇಶದಲ್ಲೇ ಈಗ ಮತ್ತೇ ಬೇಟೆಗಾರರು ಬಾಲ ಬಿಚ್ಚಿದ್ದು ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆಯೇ ಗುಂಡು ಹಾರಿಸಿರುವುದು ಆತಂಕಕ್ಕೇ ಕಾರಣವಾಗಿದೆ. ವೀರಪ್ಪನ್ ಮರಿ ಸಂತಾನಗಳು ಬಾಲ ಬಿಚ್ಚದಂತೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸನ್ನದ್ದಗೊಳ್ಳಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw