ಹೊರದೇಶದಲ್ಲಿ ಭಾರತದ ಮೊದಲ ಐಐಟಿ ಕ್ಯಾಂಪಸ್ ಸ್ಥಾಪನೆ ನಿಜನಾ..? ತಾಂಜಾನಿಯಾದ ಜಂಜಿಬಾರ್ ನಲ್ಲೇನಿದೆ ವಿಶೇಷ..? - Mahanayaka
9:47 PM Friday 20 - September 2024

ಹೊರದೇಶದಲ್ಲಿ ಭಾರತದ ಮೊದಲ ಐಐಟಿ ಕ್ಯಾಂಪಸ್ ಸ್ಥಾಪನೆ ನಿಜನಾ..? ತಾಂಜಾನಿಯಾದ ಜಂಜಿಬಾರ್ ನಲ್ಲೇನಿದೆ ವಿಶೇಷ..?

06/07/2023

ನಮ್ಮ ದೇಶದ ತಂತ್ರಜ್ಞಾನ ಸಂಸ್ಥೆ ಐಐಟಿ ಕ್ಯಾಂಪಸ್ ಇದೇ ಮೊದಲ ಬಾರಿಗೆ ದೇಶದ ಹೊರಗೆ ಸ್ಥಾಪನೆಯಾಗಲಿದೆ. ತಾಂಜಾನಿಯಾದ ಜಂಜಿಬಾರ್ ನಲ್ಲಿ ಭಾರತದ ಮೊದಲ ಐಐಟಿ ಕ್ಯಾಂಪಸ್ ಸ್ಥಾಪಿಸಲು ಭಾರತ ಯೋಚಿಸುತ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಪ್ರಕಟಣೆಯ ಮೂಲಕ‌ ತಿಳಿಸಿದೆ.

ಈಗಾಗಲೇ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತಾಂಜಾನಿಯ ಪ್ರವಾಸದಲ್ಲಿದ್ದಾರೆ. ತಾಂಜಾನಿಯಾದ ಜಾಂಜಿರಾಬಾರ್ ನಲ್ಲಿ ಐಐಟಿ ಮದ್ರಾಸ್ ಕ್ಯಾಂಪಸ್ ಸ್ಥಾಪನೆಗೆ ಇದೀಗ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಜೊತೆಗೆ ಈ ಮಹತ್ವದ ಒಪ್ಪಂದಕ್ಕೆ ಜಾಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಹಾಗೂ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸಮ್ಮುಖದಲ್ಲಿ ಇಲಾಖೆಗಳು ಸಹಿ ಹಾಕಿವೆ ಎನ್ನಲಾಗಿದೆ.


Provided by

ಭಾರತದ ಇತಿಹಾಸದಲ್ಲಿ‌ ಇದೇ ಮೊಟ್ಟ ಮೊದಲ‌ ಭಾರಿಗೆ ಭಾರತದ‌ ಹೊರಗೆ‌ ಜಿಂಜರಾಬಾದ್ ನಲ್ಲಿ ಮೊದಲು ಐಐಟಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ಭಾರತದ ಈ ಮಹತ್ವದ ತೀರ್ಮಾನಕ್ಕೆ ಭಾರತೀಯ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಹಾಗೂ ಜಂಜಿರಾಬಾರ್ ಮತ್ತು ವೃತ್ತಿಪರ ತರಬೇತಿ ಸಚಿವಾಲಯಗಳ ನಡುವೆ ತಿಳುವಳಿಕೆಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎನ್ನಲಾಗಿದೆ.

ಭಾರತವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಲವು ದೇಶಗಳೊಂದಿಗಿರುವ ಸಂಬಂಧವನ್ನು ಗಟ್ಟಿಗೊಳಿಸಲು ದಾಪುಗಾಲಿಟ್ಟಿದೆ. ಸದ್ಯ, ಇದೇ ಯೋಚನೆಯಡಿಯಲ್ಲಿ ಭಾರತದ ಹೊರಗಡೆ ಹೊಸ ಐಐಟಿ ಕ್ಯಾಂಪಸ್ ಆರಂಭಿಸಲು ಯೋಚಿಸಿದ್ದು, ಇದು ಭಾರತ ಮತ್ತು ತಾಂಜಾನಿಯಾದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಈಗಾಗಲೇ ಎರಡೂ ದೇಶಗಳು ಇದಕ್ಕೆ ಒಪ್ಪಂದ ಮಾಡಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ