ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ!

03/02/2024
ಚಿಕ್ಕಮಗಳೂರು: ಮಲೆನಾಡಿಲ್ಲಿ ಮಂಗನ ಕಾಯಿಲೆ ಮೊದಲ ಬಲಿ ಪಡೆದುಕೊಂಡಿದೆ. ಕೆ.ಎಫ್.ಡಿಗೆ 79 ವರ್ಷದ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ರೆಡ್ ಝೋನ್ ನಲ್ಲಿ ತಪಾಸಣೆ ಮಾಡಿದಾಗ ವೃದ್ದನಲ್ಲಿ ಕೆ.ಎಫ್.ಡಿ ಪತ್ತೆಯಾಗಿತ್ತು. ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕೆ.ಎಫ್.ಡಿ ಜೊತೆಗೆ ಬೇರೆ ಬೇರೆ ಕಾಯಿಲೆಗಳಿಂದ ವೃದ್ಧ ಬಳಲುತ್ತಿದ್ದರು. ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ ವೃದ್ಧ ಮೃತಪಟ್ಟವರಾಗಿದ್ದಾರೆ. ಇವರ ಸಾವಿನಿಂದಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ.
ಮಲೆನಾಡಿನಲ್ಲಿ ಮೂವರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿತ್ತು. ಇದೀಗ ಓರ್ವ ವೃದ್ಧನ ಸಾವಾಗಿದ್ದು, ಆರೋಗ್ಯ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ರೋಗ ಹರಡದಂತೆ ಕ್ರಮವಹಿಸಬೇಕು ಅಂತಾ ಸಾರ್ವಜನಿಕರು ಒತ್ತಾಯಿಸಿದ್ದಾರೆ.