ಫಿಶ್ ಕರಿಯಲ್ಲಿ ಸ್ಲೋಪಾಯ್ಸನ್ ಕೊಟ್ಟ ಅಳಿಯ | ಸಾವಿನ ದವಡೆಯಲ್ಲಿ ಸಿಲುಕಿದ ಇಡೀ ಕುಟುಂಬ - Mahanayaka

ಫಿಶ್ ಕರಿಯಲ್ಲಿ ಸ್ಲೋಪಾಯ್ಸನ್ ಕೊಟ್ಟ ಅಳಿಯ | ಸಾವಿನ ದವಡೆಯಲ್ಲಿ ಸಿಲುಕಿದ ಇಡೀ ಕುಟುಂಬ

poison curry
26/03/2021

ನವದೆಹಲಿ: ಅತ್ತೆಯ ಮನೆಯವರಿಗೆ ಊಟದಲ್ಲಿ ಸ್ಲೋ ಪಾಯ್ಸನ್ ನೀಡಿ ಅಳಿಯನೇ ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು  ದೆಹಲಿಯಲ್ಲಿ ನಡೆದಿದೆ. ಆಹಾರ ತಿಂದ ಬಳಿಕ ವಿಚಿತ್ರ ಕಾಯಿಲೆಗೆ ತುತ್ತಾದ ಅತ್ತೆ ಮನೆಯವರು ಆಸ್ಪತ್ರೆಗೆ ದಾಖಲಾಗಿದ್ದರು.

37 ವರ್ಷ ವಯಸ್ಸಿನ ವರುಣ್ ಅರೋರಾ ಈ ದುಷ್ಕೃತ್ಯ ಎಸಗಿದವನಾಗಿದ್ದಾನೆ.  ಅತ್ತೆ ಮಾವನ ಮನೆಯಲ್ಲಿದ್ದ ವರುಣ್ ಗೆ  ಅತ್ತೆ, ಮಾವ, ನಾದಿನಿ ಸೇರಿ ಕಿರುಕುಳ ನೀಡುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ  ವರುಣ್ ಜನವರಿ 29ರಂದು  ಫಿಶ್ ಕರಿಯಲ್ಲಿ  ಸ್ಲೋಪಾಯ್ಸನ್ ಬೆರೆಸಿದ್ದಾನೆ.

ವಿಷ ಬೆರೆಸಲಾಗಿದ್ದ ಊಟ ಸೇವಿಸಿದ್ದರಿಂದ  ಕುಟುಂಬಸ್ಥರಿಗೆ ತಲೆ ಸುತ್ತು, ಕೈಕಾಲು ಸೆಳೆತ, ಕೂದಲು ಉದುರುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಂಡಿದೆ.  ಫೆ.15ರಂದು  57 ವರ್ಷ ವಯಸ್ಸಿನ ಅತ್ತೆ ಅನಿತಾ ಹಾಗೂ ನಾದಿನಿ ಪ್ರಿಯಾಂಕ ಈ ಭಯಾನಕ ವಿಷಕ್ಕೆ ಬಲಿಯಾಗಿದ್ದಾರೆ. ಸದ್ಯ ಮಾವ ಹಾಗೂ ಅವರ ಮಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ವಿಷ ಸೇವಿಸಿದ ಮೂವರ ವೈದ್ಯಕೀಯ ವರದಿಗಳನ್ನು ನೋಡಿದಾಗ ನಮಗೆ ಅನುಮಾನ ಬಂತು. ವರುಣ್ ನನ್ನು ವಿಚಾರಣೆ ನಡೆಸಿದಾಗ ಆತ ತಾನು ಆಹಾರದಲ್ಲಿ ವಿಷ ಇಟ್ಟಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ