ಮೀನುಗಾರಿಕೆ ಸಚಿವರು ಜಿಲ್ಲೆಯವರೇ ಆದ್ರೂ, ಮೀನುಗಾರರನ್ನು ನಿರ್ಲಕ್ಷ್ಯ ಮಾಡಲಾಗಿದೆ: ಐವನ್ ಡಿಸೋಜಾ

Ivan d'souza
14/12/2022

ಮೀನುಗಾರಿಕೆಯನ್ನು ಜಿಲ್ಲೆಯ ಸಚಿವರೇ ಖಾತೆ ಹೊಂದಿದ್ದರೂ ಮೀನುಗಾರರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಮಾಜಿ ಶಾಸಕ ಐವನ್ ಡಿಸೋಜಾ ಆರೋಪಿಸಿದ್ದಾರೆ.

ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಅವರು, 2009-10ನೇ ಸಾಲಿನಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಇದ್ದ ಒಟ್ಟು 1022 ಮತ್ತು ಟ್ರಾಲ್ ಬೋಟುಗಳ ಸಂಖ್ಯೆಗೆ ಅನುಗುಣವಾಗಿ 3ನೆ ಹಂತದ ಕಾಮಗಾರಿಯು ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ರೂ.57.60 ಕೋಟಿಗಳಿಗೆ ಅನುಮೋದನೆಗೊಂಡಿರುತ್ತದೆ.

ಯೋಜನೆಯು ಪ್ರಾರಂಭವಾದ ನಂತರ ಪ್ರಸಕ್ತ ಮೀನುಗಾರಿಕಾ ಚಟುವಟಿಕೆಗಳ ಬೇಡಿಕೆಗಳಂತೆ ಯೋಜನೆಯನ್ನು ಕೈಗೊಳ್ಳಲಾಗಿರುತ್ತದೆ. ಪ್ರಸಕ್ತ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ 1400ಕ್ಕೂ ಹೆಚ್ಚಿನ ಪರ್ಸಿನ್ ಮತ್ತು ಟ್ರಾಲ್ ಬೋಟುಗಳು ಇದ್ದು ಇಷ್ಟೊಂದು ಬೋಟುಗಳನ್ನು ಲಂಗರು ಹಾಕಲು ಜೆಟ್ಟಿ ಮತ್ತು ಪ್ರಸಕ್ತ ಮೀನುಗಾರಿಕಾ ಬಂದರಿಗೆ ಅಗತ್ಯವಿರುವ ಸೌಲಭ್ಯಗಳು ಇಲ್ಲದೆ ಇರುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗಿರುತ್ತದೆ ಎಂದರು‌.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version