ಮಲ್ಪೆ: 7 ಮಂದಿ ಮೀನುಗಾರರಿದ್ದ ಮೀನುಗಾರಿಕಾ ಬೋಟು ಮುಳುಗಡೆ - Mahanayaka

ಮಲ್ಪೆ: 7 ಮಂದಿ ಮೀನುಗಾರರಿದ್ದ ಮೀನುಗಾರಿಕಾ ಬೋಟು ಮುಳುಗಡೆ

boat
10/09/2022

ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟು ಸಮುದ್ರದಲ್ಲಿ ಮುಳುಗಡೆಗೊಂಡಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.


Provided by

ಲತೀಶ್ ಮೆಂಡನ್ ಅವರಿಗೆ ಸೇರಿದ ಶ್ರೀ ದುರ್ಗಾ ವೈಷ್ಣವಿ ಆಳಸಮುದ್ರ ಬೋಟು ಅ. 29ರಂದು ರಾತ್ರಿ ಮಲ್ಪೆ ಬಂದರಿನಿಂದ ಹೊರಟಿತ್ತು. ಮೀನುಗಾರಿಕೆ ಮುಗಿಸಿ ವಾಪಾಸು ಬರುವಾಗ ಸೆ. 8ರಂದು ಬೆಳಗ್ಗೆ ಗಂಗೊಳ್ಳಿ ನೇರ ಸುಮಾರು 15 ಮಾರು ಆಳ ದೂರ ಬೋಟಿನ ಕೆಳಭಾಗಕ್ಕೆ ಗಟ್ಟಿಯಾದ ವಸ್ತು ತಾಗಿದಂತಾಯಿತು. ಪರಿಣಾಮ ಬೋಟಿನೊಳಗೆ ನೀರು ಬರಲಾರಂಭಿಸಿತು. ಬೋಟಿನಲ್ಲಿದ್ದ ಕಾರ್ಮಿಕರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ನೀರಿನ ಒಳ ಹರಿವು ಹೆಚ್ಚಾಗಿ ಬೋಟ್ ನ ಇಂಜಿನ್ ಕೆಟ್ಟು ಹೋಗಿ ಬಂದ್ ಬಿದ್ದು ಬೋಟು ಮುಳುಗಡೆಗೊಂಡಿತು.

ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸ್ವರ್ಣ ಮಂಗಳ, ಸಮೃದ್ದಿ, ಸಮುದ್ರತನಯ ಬೋಟಿನವರು ತಕ್ಷಣ ಧಾವಿಸಿ ಬಂದ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಮೂರು ಬೋಟಿನ ಸಹಾಯದಿಂದ ಎಳೆದು ತರುವಾಗಿ ಸಂಜೆ ಹಂಗಾರಕಟ್ಟೆ ಬೆಂಗ್ರೆ ಸಮೀಪ ಬೋಟು ಸಂಪೂರ್ಣ ಮುಳುಗಡೆಗೊಂಡಿತ್ತು. ಹಿಡಿದ ಮೀನು, ಬಲೆ, ಎಂಜಿನ್ ಸೇರಿ ಸುಮಾರು 50 ಲಕ್ಷ ರೂ. ನಷ್ಟ ಉಂಟಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ