12:08 PM Wednesday 12 - March 2025

ಜೀವ ತೆಗೆದ ಚಳಿ: ಉಸಿರುಗಟ್ಟಿ ದಂಪತಿ ಸೇರಿ ಮೂವರು ಮಕ್ಕಳು ಸಾವು

06/01/2025

ದೇಶಾದ್ಯಂತ ಚಳಿ ತೀವ್ರವಾಗುತ್ತ ಸಾಗಿದೆ. ಕರ್ನಾಟಕದಲ್ಲಿ ಉಷ್ಣತೆ 15 ಡಿಗ್ರಿ ಸೆಲ್ಸಿಯಸ್‌ ನಷ್ಟು ಇಳಿದಿದೆ. ಚಳಿ ತಡೆಯಲು ಸಾಧ್ಯವಾಗದೇ ಉಸಿರುಗಟ್ಟಿ ದಂಪತಿ ಸೇರಿ ಮೂವರು ಮಕ್ಕಳು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಂಭವಿಸಿದೆ.

ಮೃತರನ್ನು ಮೂಲತಃ ಬಾರಾಮುಲ್ಲಾ ಜಿಲ್ಲೆಯವರು ಎನ್ನಲಾಗಿದೆ. ಬಾರಾಮುಲ್ಲಾದಿಂದ ಬಂದಿದ್ದ ದಂಪತಿ ಹಾಗೂ ಅವರ ಮೂವರು ಮಕ್ಕಳು ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಭಾರಿ ಚಳಿಯಿಂದ ಈ ಐವರು ಉಸಿರುಗಟ್ಟಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರ ಕಣಿವೆ ಕಳೆದ 40 ದಿನಗಳಿಂದ ಭಾರಿ ಚಳಿಗೆ ತುತ್ತಾಗಿದೆ. ಎಲ್ಲೆಡೆ ಹಿಮ ಆವರಿಸುತ್ತಿದೆ. ಜನ ಮನೆಯಿಂದ ಹೊರ ಬರುತ್ತಿಲ್ಲ. ಇನ್ನೂ ಕೆಲ ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಚಂಡಮಾರುತಗಳ ಕಾರಣದಿಂದಾಗಿ ಹಲವು ದಿನಗಳು ಮೋಡ ಕವಿದ ವಾತಾವಾರಣವಿತ್ತು. ಹೀಗಾಗಿ ಚಳಿಗಾಲದ ಮೇಲೆ ಪರಿಣಾಮ ಬೀರಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version