ಮಸೀದಿಗೆ ಕಲ್ಲೆಸೆತ: ಐವರು ಕಿಡಿಗೇಡಿಗಳ ಬಂಧನ
16/09/2024
ಸುರತ್ಕಲ್: ಕಾಟಿಪಳ್ಳ 3ನೇ ಬ್ಲಾಕ್ ನ ಮಸ್ಜಿದುಲ್ ಹುದಾ ಜುಮಾ ಮಸೀದಿಗೆ ಹಲ್ಲೆಸೆದು ಹಾನಿಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಐವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ನ ಆಶ್ರಯ ಕಾಲೋನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್, ಈಶ್ವರ ನಗರ ನಿವಾಸಿ ಮನು ಮತ್ತು ಮುಂಚೂರು ನಿವಾಸಿ ಸುಜಿತ್ ಬಂಧಿತ ಆರೋಪಿಗಳಾಗಿದ್ದಾರೆ.
ಜನತಾ ಕಾಲೋನಿ ಸ್ಮಶಾನ ಕಡೆಯಿಂದ 2 ಬೈಕ್ ಗಳಲ್ಲಿ ಕಿಡಿಗೇಡಿಗಳು ಬಂದಿದ್ದು, ಮಸೀದಿ ಹಿಂಭಾಗದ ಕಿಟಕಿ ಮೇಲೆ ಕಲ್ಲು ತೂರಾಟ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: