ದುರಂತ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಒಂದೇ ಕುಟುಂಬದ ಐವರು ಸಾವು

ತೆರೆದ ಬಾವಿಯಲ್ಲಿ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ನೇವಾಸಾ ತಾಲೂಕಿನ ವಕಾಡಿ ಗ್ರಾಮದಲ್ಲಿ ನಡೆದಿದೆ. ಬಾವಿಗೆ ಬೆಕ್ಕು ಬಿದ್ದಿತ್ತು. ಅದನ್ನ ರಕ್ಷಿಸಲು ಮೊದಲು ಒಬ್ಬರು ಇಳಿದಿದ್ದರು. ಇವರನ್ನು ರಕ್ಷಿಸಲು ಮತ್ತೊಬ್ಬರು ಬಾವಿಗೆ ಹಾರಿದ್ದಾರೆ. ಹೀಗೆ ಆರು ಜನರು ಬಾವಿಗೆ ಹಾರಿದ್ದರು. ಇವರಲ್ಲಿ ಒಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಐವರು ಸಾವನ್ನಪ್ಪಿದ್ದಾರೆ.
ಮಧ್ಯರಾತ್ರಿ 12.30ರವರೆಗೆ ಶವಗಳನ್ನು ಹೊರ ತೆಗೆಯುವ ಕಾರ್ಯ ಮುಂದುವರಿದಿದೆ ಎಂದು ನೇವಾಸಾ ಪೊಲೀಸ್ ಠಾಣೆಯ ಪಿಐ ಧನಂಜಯ್ ಜಾಧವ್ ತಿಳಿಸಿದ್ದಾರೆ. ಒಂದು ಮೃತದೇಹವನ್ನು ಹೊರತೆಗೆದರೆ, ಮುಂದಿನ ಒಂದೂವರೆ ಗಂಟೆಯಲ್ಲಿ ಉಳಿದ ನಾಲ್ಕು ದೇಹಗಳನ್ನು ತೆಗೆಯಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth