ಬುದ್ಧರ ಬೋಧನೆ, ಪಂಚಶೀಲ ತತ್ವದಲ್ಲಿದೆ ನಿಜ ಜೀವನದ ಸತ್ಯ: ಗೌರವದಿಂದ ಬದುಕಲು ಏನು ಮಾಡಬೇಕು? - Mahanayaka
1:10 AM Monday 16 - September 2024

ಬುದ್ಧರ ಬೋಧನೆ, ಪಂಚಶೀಲ ತತ್ವದಲ್ಲಿದೆ ನಿಜ ಜೀವನದ ಸತ್ಯ: ಗೌರವದಿಂದ ಬದುಕಲು ಏನು ಮಾಡಬೇಕು?

budha
19/08/2024

ಜಗತ್ತಿನ ಸಕಲ ಸುಖ—ದುಃಖಗಳಿಗೂ ಉತ್ತರ ನೀಡಿದವರು ಗೌತಮ ಬುದ್ಧರು. ಅವರ ಬೋಧನೆಗಳು ಮತ್ತು ಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಿದೆ. ಯಾಕೆಂದರೆ, ಬುದ್ಧರ ಬೋಧನೆಗಳು ನಮಗೆ ಜೀವನದ ಅನುಭವಗಳನ್ನು ನೀಡಿದರೆ, ಪಂಚಶೀಲ ತತ್ವಗಳು ನಾವು ಈ ಸಮಾಜದಲ್ಲಿ ಹೇಗೆ ಬದುಕಬೇಕು, ಹೇಗೆ ಬದುಕಿದರೆ ನಮಗೆ ಗೌರವ ಸಿಗುತ್ತದೆ ಎನ್ನುವುದನ್ನು ತೋರಿಸುವ ಮಾರ್ಗದರ್ಶನ ನೀಡುತ್ತದೆ.

ಬುದ್ಧರ ಬೋಧನೆಗಳನ್ನು ಸರಳವಾಗಿ ತಿಳಿಯೋಣ:

ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರೂ ಅನುಭವಿಸಲೇ ಬೇಕಿರುವ ಸತ್ಯಗಳನ್ನು ಬುದ್ಧರು ಹೇಳುತ್ತಾರೆ.


Provided by

*  ಸಂಕಟ ಸಾಮಾನ್ಯ : ಜನನ, ಅನಾರೋಗ್ಯ, ವೃದ್ಧಾಪ್ಯ, ಸಾವು ಇತ್ಯಾದಿ.

ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಸಂಕಟ ಎನ್ನುವುದು ಇದ್ದದ್ದೆ. ಅದು ಬಡವ, ಶ್ರೀಮಂತ ಎನ್ನುವ ಯಾವುದೇ ಭೇದಭಾವಗಳಿಲ್ಲದೇ ಬರುವಂತಹದ್ದು, ಹುಟ್ಟಿದ ಮನುಷ್ಯನಿಗೆ ಅನಾರೋಗ್ಯ, ವೃದ್ಧಾಪ್ಯ, ಸಾವು ಇವುಗಳು ಬಂದೇ ಬರುತ್ತದೆ. ಇದನ್ನು ತಡೆಯಲು ಸಾಧ್ಯವಿಲ್ಲ.

*  ದುಃಖದ ಕಾರಣ : ಅಜ್ಞಾನ ಮತ್ತು ದುರಾಸೆ

ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬರೂ ಸುಖವಾಗಿ ಬದುಕಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದಕ್ಕೆ ಆಯ್ದುಕೊಳ್ಳುವ ಮಾರ್ಗಗಳು ಅಜ್ಞಾನದಿಂದ ಕೂಡಿದ್ದರೆ, ದುರಾಸೆಯಿಂದ ಕೂಡಿದ್ದರೆ. ಅದು ದುಃಖಕ್ಕೆ ಕಾರಣವಾಗಬಹುದು.

*  ದುಃಖದ ಅಂತ್ಯ : ದುರಾಸೆ ಮತ್ತು ಅಜ್ಞಾನವನ್ನು ಬಿಡುವುದು.

ದುಃಖವನ್ನು ಅಂತ್ಯ ಮಾಡುವುದು ಹೇಗೆ ಎಂದರೆ, ದುರಾಸೆ ಮತ್ತು ಅಜ್ಞಾನವನ್ನು ಬಿಡುವುದೇ ದುಃಖದ ಅಂತ್ಯಕ್ಕೆ ಪರಿಹಾರ. ಅಂದರೆ, ನಿಮ್ಮಲ್ಲಿ ಏನಿದೆಯೋ ಅದರಲ್ಲಿ ತೃಪ್ತಿ ಕಾಣುವುದು ಮತ್ತು ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೇ ವಾಸ್ತವ ನೆಲೆಯಲ್ಲಿ ನೀವು ಅಂದುಕೊಂಡಿರುವುದನ್ನು ಸಾಧಿಸಲು ಪ್ರಯತ್ನಿಸುವುದು.

*  ದುಃಖದಿಂದ ಪಾರಾಗಲು ಈ ಮಾರ್ಗ ಸೂಕ್ತ:

1) ಸರಿಯಾದ ನೋಟ; 2) ಸರಿಯಾದ ಆಲೋಚನೆ; 3) ಸರಿಯಾದ ಮಾತು; 4) ಸರಿಯಾದ ನಡವಳಿಕೆ; 5) ಸರಿಯಾದ ಜೀವನೋಪಾಯ; 6) ಸರಿಯಾದ ಪ್ರಯತ್ನ; 7) ಸರಿಯಾದ ಮೈಂಡ್‌ ಫುಲ್‌ ನೆಸ್; 8) ಸರಿಯಾದ ಏಕಾಗ್ರತೆ.

ಪಂಚಶಿಲಾ:

1.  ಕೊಲ್ಲುವದಿಲ್ಲ, ಜೀವನ ಗೌರವ

ಕೊಲ್ಲುವುದಿಲ್ಲ, ಅಥವಾ ಹಿಂಸೆಯನ್ನು ಮಾಡುವುದಿಲ್ಲ. ಒಬ್ಬ ಕೊಲೆಗಾರನನ್ನು ಯಾರು ಕೂಡ ಮನಸಾರೆ ಗೌರವಿಸಲಾರರು. ಆತ ಒಬ್ಬ ಕೊಲೆಗಾರ ಎನ್ನುವುದು ಎಲ್ಲರ ಮನಸ್ಸಲ್ಲಿ ಇರುತ್ತದೆ. ಆತ ಕೊಂದಿದ್ದಾನೆ ಎನ್ನುವ ಕಾರಣಕ್ಕೆ ಆತನಿಗೆ ಜೀವನದಲ್ಲಿ ಗೌರವ ಸಿಗದು.

2.  ಕದಿಯುವಂತಿಲ್ಲ ಇತರರ ಆಸ್ತಿಗೆ ಗೌರವ

ಜೀವನದಲ್ಲಿ ಎಂತಹ ಕಠಿಣ ಸಂದರ್ಭಗಳು ಬಂದರೂ ಕಳ್ಳತನ ಮಾಡಬಾರದು. ಇತರರು ಸಂಪಾದಿಸಿದ ಆಸ್ತಿಗೆ ಗೌರವಕೊಡಬೇಕು. ಒಬ್ಬ ಕಳ್ಳನನ್ನು ಸಮಾಜ ಎಂದಿಗೂ ನಂಬಿಕೆ, ವಿಶ್ವಾಸದಿಂದ ಕಾಣಲು ಸಾಧ್ಯವಿಲ್ಲ, ಸ್ವಂತ ಮನೆಯಲ್ಲೇ ಆತನನ್ನು ನಂಬಿಕೆಯಿಂದ ನೋಡಲು ಸಾಧ್ಯವೇ?

3.   ಲೈಂಗಿಕ ದುರ್ನಡತೆ ಇಲ್ಲ ನಮ್ಮ ಶುದ್ಧ ಸ್ವಭಾವಕ್ಕೆ ಗೌರವ

ಲೈಂಗಿಕ ದುರ್ನಡತೆ ಇರುವ ಮನುಷ್ಯನನ್ನು ಯಾರು ಕೂಡ ಹತ್ತಿರಕ್ಕೆ ಸೇರಿಸಲಾರರು. ಪುರುಷನಾಗಲಿ—ಮಹಿಳೆಯಾಗಲಿ, ಲೈಂಗಿಕ ದುರ್ನಡತೆಯನ್ನು ಜೀವನದಲ್ಲಿ ಅಳವಡಿಸಬಾರದು. ಅದು ನಿಮ್ಮ ಆತ್ಮಗೌರವಕ್ಕೆ ಪೆಟ್ಟು ನೀಡುತ್ತದೆ. ಸಮಾಜದಲ್ಲಿ ನಿಮಗೆ ಗೌರವ ಸಿಗದು.

4.  ಸುಳ್ಳು ಹೇಳುವುದಿಲ್ಲ ಪ್ರಾಮಾಣಿಕತೆಗೆ ಗೌರವ

ಸುಳ್ಳು ಹೇಳುವ ವ್ಯಕ್ತಿ ಸಮಾಜದ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಆತನನ್ನು ಯಾರು ಕೂಡ ಪ್ರಾಮಾಣಿಕ ಎಂದು ನಂಬಲಾರರು. ಸುಳ್ಳು ಹೇಳುವ ಛಾಳಿ ನಿಮಗೆ ಸಮಾಜದಲ್ಲಿ ಅಗೌರವ ಉಂಟು ಮಾಡಬಹುದು. ಸುಳ್ಳು ಹೇಳುವ ವ್ಯಕ್ತಿಯನ್ನು ಆತನ ತಂದೆ—ತಾಯಿ, ಸಹೋದರ—ಸಹೋದರಿ, ಹೆಂಡತಿ, ಮಕ್ಕಳು ಕೂಡ ನಂಬದೇ ಅನುಮಾನದಿಂದ ನೋಡಬಹುದು. ಹಾಗಾಗಿ ಸುಳ್ಳು ಹೇಳದೇ ಪ್ರಾಮಾಣಿಕವಾಗಿ ಬದುಕಬೇಕು.

5.  ಯಾವುದೇ ಅಮಲು ಪದಾರ್ಥಗಳು ಸ್ವಚ್ಛ ಮನಸ್ಸಿಗೆ ಗೌರವ

ಯಾವುದೇ ಅಮಲು ಪದಾರ್ಥಗಳನ್ನು ಸೇವನೆ ಮಾಡಬಾರದು. ಇದು ಸ್ವತಃ ನಿಮ್ಮ ಮಾನಸಿಕ ನೆಮ್ಮದಿಯನ್ನು ಮಾತ್ರವಲ್ಲದೇ ನಿಮ್ಮವರ ಮಾನಸಿಕ ನೆಮ್ಮದಿಯನ್ನೂ ಕೆಡಿಸುತ್ತದೆ. ಕುಡಿತದಿಂದ ನಿಮ್ಮ ಆತ್ಮಗೌರವಕ್ಕೆ ಪೆಟ್ಟು ಸಿಗುತ್ತದೆ. ನೀವು ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲವಾಗಬಹುದು. ನಿಮ್ಮ ಕುಟುಂಬಸ್ಥರೇ ನಿಮ್ಮನ್ನು ದೂರವಿಡಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ