ಸ್ಪೇನ್ ನಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 205ಕ್ಕೆ ಏರಿಕೆ
ಸ್ಪೇನ್ ದೇಶದಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿನ ವೆಲೆನ್ಸಿಯಾ, ಕ್ಯಾಸ್ಟಿಲ್ಲಾ-ಲಾ ಮಂಚಾ ಮತ್ತು ಅಂಡಲೂಸಿಯಾ ಪ್ರದೇಶಗಳಲ್ಲಿ ಭೀಕರ ಪ್ರವಾಹದಿಂದಾಗಿ 205 ಜನರು ಸಾವನ್ನಪ್ಪಿದ್ದಾರೆ.
ಅನೇಕ ಪ್ರದೇಶಗಳಲ್ಲಿ ಚದರ ಮೀಟರ್ ಗೆ 400 ಲೀಟರ್ ಗಿಂತ ಹೆಚ್ಚು ಮತ್ತು ಕೆಲವು ಪ್ರದೇಶಗಳಲ್ಲಿ 600 ಲೀಟರ್ ವರೆಗೆ ತೀವ್ರ ಮಳೆ ಆದ ಕಾರಣ ವಿನಾಶಕಾರಿ ಪ್ರವಾಹಕ್ಕೆ ಕಾರಣವಾಯಿತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊಗಳಲ್ಲಿ ಸೇತುವೆಗಳು ಹಾಗೂ ರೈಲ್ವೆ ಸುರಂಗಗಳು ಕುಸಿದು ಕೊಚ್ಚಿಹೋದ ದೃಶ್ಯಗಳು ಮನಮಿಡಿಯುವಂತಿದೆ.
ಸೆಂಟರ್ ಫಾರ್ ಕೋಆರ್ಡಿನೇಟೆಡ್ ಅಂಡ್ ಇಂಟಿಗ್ರೇಟೆಡ್ ಆಪರೇಶನ್ಸ್ ಪ್ರಕಾರ ಅಧಿಕೃತ ಸಾವಿನ ಸಂಖ್ಯೆ ಈಗ 205 ಕ್ಕೆ ಏರಿದೆ. ವೆಲೆನ್ಸಿಯಾ ಪ್ರದೇಶದಲ್ಲಿ 202 ಸಾವುಗಳು, ಕ್ಯಾಸ್ಟಿಲ್ಲಾ-ಲಾ ಮಂಚಾದಲ್ಲಿ ಎರಡು ಮತ್ತು ಆಂಡಲೂಸಿಯಾದಲ್ಲಿ ಒಂದು ಸಾವು ಪ್ರಕರಣ ನಡೆದಿದೆ.
ಫೆರಿಯಾ ಡಿ ವೇಲೆನ್ಸಿಯಾ ಪ್ರದರ್ಶನ ಕೇಂದ್ರವನ್ನು ತಾತ್ಕಾಲಿಕ ಶವಾಗಾರವಾಗಿ ಬಳಸಬೇಕಾಯಿತು. ಇನ್ನೂ ಅನೇಕರು ಕಾಣೆಯಾಗಿರುವುದರಿಂದ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಸ್ಪ್ಯಾನಿಷ್ ಪತ್ರಿಕೆ Eldiario.es ಪ್ರಕಾರ, 1,900 ಜನರು ಇನ್ನೂ ಕಾಣೆಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರು ತಮ್ಮ ಕಾರುಗಳೊಂದಿಗೆ ತೀವ್ರ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj