ಸೆಕ್ಯೂರಿಟಿ ಗಾರ್ಡೇ ‘ಕಳ್ಳರ ಗುರು’: ಫ್ಲ್ಯಾಟ್ ಗಳಿಂದ ಕಳ್ಳತನವಾಗಿದ್ದೆಷ್ಟು ಗೊತ್ತಾ?
ಬೆಂಗಳೂರು: ಕಳ್ಳರು, ದರೋಡೆಕೋರರು ಫ್ಲ್ಯಾಟ್ ಗೆ ಬರಬಾರದು ಎಂದು ಸೆಕ್ಯೂರಿಟಿ ಗಾರ್ಡ್ ಗಳನ್ನು ಫ್ಲ್ಯಾಟ್ ಗಳಲ್ಲಿ ನೇಮಕ ಮಾಡ್ತಾರೆ. ಆದರೆ, ಇಲ್ಲೊಂದು ಪ್ಲ್ಯಾಟ್ ನಲ್ಲಿ ಕಳ್ಳರ ಗುರುವಾಗಿದ್ದ ಸೆಕ್ಯೂರಿಟಿ ಗಾರ್ಡ್ ನ್ನೇ ಫ್ಲ್ಯಾಟ್ ನೋಡಿಕೊಳ್ಳಲು ನೇಮಿಸಿದ್ದು, ಪರಿಣಾಮವಾಗಿ ಫ್ಲ್ಯಾಟ್ ಗಳಲ್ಲಿ ನಿರಂತರವಾಗಿ ಕಳ್ಳತನ ನಡೆದಿದೆ.
ಇಲ್ಲಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಬೃಹತ್ ಕಳ್ಳತನದ ಜಾಲವೊಂದು ಬಯಲಿಗೆ ಬಂದಿದೆ.
ಕಳ್ಳರ ಗುರು, ಸೆಕ್ಯೂರಿಟಿ ಗಾರ್ಡ್ ಕರಣ್ ಬಿಸ್ವಾ ಹಾಗೂ ಮುಂಬೈಯ ಕಳ್ಳರ ತಂಡ ಹಿಕಮತ್ ಶಾಹಿ, ರಾಜು ಬಿ.ಕೆ.ಅಲಿಯಾಸ್ ಚಾಮ್ಡಿ, ಜೀವನ್ ಮತ್ತು ಗೋರಕ್ ಕಾಲು ಬಂಧಿತ ಆರೋಪಿಗಳಾಗಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕರಣ್ ಬಿಸ್ವಾ, ಫ್ಲ್ಯಾಟ್ ನ ನಿವಾಸಿಗಳು ಹೊರಗೆ ಹೋದರೆ ಆ ಮಾಹಿತಿಯನ್ನು ಮುಂಬೈನಲ್ಲಿದ್ದ ತನ್ನ ತಂಡಕ್ಕೆ ಹೇಳುತ್ತಿದ್ದ. ಆ ತಂಡ ಬಂದು ಕಳ್ಳತನ ಮಾಡಿ ಹೊರಟು ಹೋಗುತ್ತಿತ್ತು. ಆ ಬಳಿಕ ತನಗೆ ಏನೂ ಗೊತ್ತಿಲ್ಲ ಎಂಬಂತಿರುತ್ತಿದ್ದ ಎನ್ನಲಾಗಿದೆ.
ಕಳ್ಳರು ಎಷ್ಟೇ ಚಾಲಕಿತನ ಮೆರೆದರೂ ಪೊಲೀಸರು ಅದನ್ನೂ ಮೀರಿ ಯೋಚಿಸುತ್ತಾರೆ. ಇದೀಗ ಹೆಣ್ಣೂರು ಪೊಲೀಸರು ಪ್ರಮುಖ ಆರೋಪಿ ಹಾಗೂ ಆತನ ಗ್ಯಾಂಗ್ ನ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಐವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರ ಆರೋಪಿಗಳಿಂದ ಬರೋಬ್ಬರಿ 9.3 ಲಕ್ಷ ನಗದು ಹಾಗೂ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇದೆಯಾ? | ಕೊವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು?
ಗುಡ್ ನ್ಯೂಸ್: ಹೆಲಿಕಾಫ್ಟರ್ ಪತನದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ
ಇಯರ್ ಫೋನ್ ಬಳಕೆಯಿಂದ ನಮ್ಮ ಮೆದುಳಿಗೆ ಆಗುವ ಸಮಸ್ಯೆಗಳೇನು ಗೊತ್ತಾ?
ಸೇನಾ ಹೆಲಿಕಾಫ್ಟರ್ ಪತನದ ಹಿಂದೆ ಚೀನಾ ಕೈವಾಡ? | ಲೇಸರ್ ದಾಳಿ ನಡೆಯಿತೇ?
ಸೇನಾ ವಿಮಾನ ಪತನ: 14 ಮಂದಿಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಇವರೊಬ್ಬರೇ…