ಅಂಗಾಂಗದಾನ ಮಾಡಿದ ಧನ್ಯಕುಮಾರ್ ಅವರಿಗೆ ಪುಷ್ಪನಮನ, ಅಂಗಡಿ ಮುಂಗಟ್ಟು ಮುಚ್ಚಿ ಶ್ರದ್ದಾಂಜಲಿ - Mahanayaka
5:04 PM Thursday 12 - December 2024

ಅಂಗಾಂಗದಾನ ಮಾಡಿದ ಧನ್ಯಕುಮಾರ್ ಅವರಿಗೆ ಪುಷ್ಪನಮನ, ಅಂಗಡಿ ಮುಂಗಟ್ಟು ಮುಚ್ಚಿ ಶ್ರದ್ದಾಂಜಲಿ

dhanya kumar
12/12/2022

ಕೊಟ್ಟಿಗೆಹಾರ: ಸಬ್ಬೇನಹಳ್ಳಿಯಲ್ಲಿ ಬೈಕ್ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಧನ್ಯಕುಮಾರ್ (37) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಧನ್ಯಕುಮಾರ್ ಅವರ ಅಂಗಾಂಗಗಳನ್ನು ಅವರ ಪೋಷಕರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಹೊರಟ್ಟಿ ಗ್ರಾಮದ ಹೆಚ್.ಬಿ.ಮಂಜುನಾಥ್ ಗೌಡ ಮತ್ತು ಶೈಲಾ.ಎನ್.ಅರ್. ದಂಪತಿಗಳ ಮಗನಾದ ಧನ್ಯಕುಮಾರ್ ಹೆಚ್.ಎಂ.ಸಬ್ಬೇನಹಳ್ಳಿ ಸಮೀಪ ಬೈಕ್ ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಮೃತ ಪಟ್ಟಿದ್ದು ಅವರ ಅಂಗಗಳನ್ನು ದಾನ ಮಾಡಲು ಅವರ ತಂದೆ, ತಾಯಿ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದ್ದು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗನ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಧನ್ಯಕುಮಾರ್ ಅವರ ಮೂತ್ರಪಿಂಡವನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ, ಕಣ್ಣುಗಳನ್ನು ಫಾದರ್ಸ್ ಮುಲ್ಲರ್ ಆಸ್ಪತ್ರೆಗೆ, ಹೃದಯ ಮತ್ತು ಶ್ವಾಸಕೋಶವನ್ನು ಚೆನೈನ ಆಸ್ಪತ್ರೆಗೆ, ಲಿವರ್ ಮತ್ತು ಇತರ ಅಂಗಾಂಗಳನ್ನು ಬೆಂಗಳೂರು ಆಸ್ಪತ್ರೆಗೆ ದಾನವಾಗಿ ನೀಡಲಾಗಿದೆ. ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದ ಧನ್ಯಕುಮಾರ್ ಪತ್ನಿ, ನಾಲ್ಕು ವರ್ಷದ ಮಗಳು, ತಂದೆ, ತಾಯಿ, ಆಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕೊಟ್ಟಿಗೆಹಾರದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಶ್ರದ್ದಾಂಜಲಿ ಸಲ್ಲಿಕೆ:

ಧನ್ಯಕುಮಾರ್ ಅವರ ಮೃತದೇಹ ಸೋಮವಾರ ರಾತ್ರಿ ಕೊಟ್ಟಿಗೆಹಾರಕ್ಕೆ ಆಗಮಿಸುತ್ತಿದ್ದಂತೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಕೆಲ ಸಮಯ ಮುಚ್ಚಿ ಶ್ರದ್ದಾಂಜಲಿ ಸಲ್ಲಿಸಿದರು. ವರ್ತಕರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ನೂರಾರು ಸಾರ್ವಜನಿಕರು ರಸ್ತೆಯ ಇಬ್ಬದಿಯಲ್ಲಿ ನೆರೆದು ಧನ್ಯಕುಮಾರ್ ಅವರಿಗೆ ಕೂಗಿದರು. ಈ ಸಂದರ್ಭದಲ್ಲಿ ವರ್ತಕರು, ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ