ಜಾನಪದ ಕಲಾವಿದ ಹೆಚ್. ಕೃಷ್ಣಯ್ಯ ಲಾಯಿಲ ನಿಧನ - Mahanayaka
1:14 AM Wednesday 11 - December 2024

ಜಾನಪದ ಕಲಾವಿದ ಹೆಚ್. ಕೃಷ್ಣಯ್ಯ ಲಾಯಿಲ ನಿಧನ

h krishnaiha
21/02/2023

ಬೆಳ್ತಂಗಡಿ: ಜಾನಪದ ಕಲಾವಿದ ಬಹುಮುಖ ಪ್ರತಿಭೆ ಲಾಯಿಲ ಗ್ರಾಮದ  ಹೆಚ್.ಕೃಷ್ಣಯ್ಯ  ಅವರು ಫೆ.20ರಂದು ಸಂಜೆ  ತನ್ನ ಮನೆಯಲ್ಲಿ‌ ನಿಧನಹೊಂದಿದ್ದಾರೆ.

ಅವರು ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ  ಬಳಲುತಿದ್ದರು. ಲಾಯಿಲ ಗ್ರಾಮದ ಉತ್ಸಾಹಿ ಯುವಕ ಮಂಡಲವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಇವರು ಆಕಾಶವಾಣಿ , ದೂರದರ್ಶನದಲ್ಲೂ  ಹಲವಾರೂ ಕಾರ್ಯಕ್ರಮ ನೀಡುತಿದ್ದರು.

ಜನಪದ ಎಲ್ಲಾ ಕಲಾ ಪ್ರಕಾರಗಳು , ಲಾವಣಿ, ರಂಗಗೀತೆ , ಭಾವಗೀತೆ , ಭಕ್ತಿಗೀತೆ , ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಶಾಲಾ ದಿನಗಳಲ್ಲಿ ರೆಡಿಯೋ ಮೂಲಕ ಹಾಡುಗಳನ್ನು ಕಲಿತ ಇವರು ರಾಜ್ಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

ಇವರಿಗೆ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿದೆ. ಇವರ ನಿಧನಕ್ಕೆ ಹಲವಾರೂ ಮಂದಿ ಸಂತಾಪ ಸೂಚಿಸಿದ್ದು ಇಂದು ಮನೆಯಲ್ಕಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ