ಫುಡ್​ ಡೆಲಿವರಿ ವಿಳಂಬ: ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ - Mahanayaka
8:08 PM Wednesday 11 - December 2024

ಫುಡ್​ ಡೆಲಿವರಿ ವಿಳಂಬ: ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

food delivery boy
24/12/2021

ಬೆಂಗಳೂರು: ಫುಡ್​ ಡೆಲಿವರಿ ಮಾಡುವುದು ತಡವಾಗುತ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬುವ ಮೂಲಕ ಮಹಿಳೆಯೊಬ್ಬಳು ದಬ್ಬಾಳಿಕೆ ನಡೆಸಿರುವ ಘಟನೆ ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಜಯ್ ಹೆಸರಿನ ಡೆಲಿವರಿ ಬಾಯ್ ಫುಡ್ ಪ್ಯಾಕೇಟ್ ಪಡೆಯಲು ಲಿಯಾನ್ ಗ್ರಿಲ್ ರೆಸ್ಟೋರೆಂಟ್​ಗೆ ಬಂದಿದ್ದ. ಈ ವೇಳೆ ಪುಡ್ ಪ್ಯಾಕೆಟ್ ಕೊಡಲು ತಡಮಾಡಿದ್ದಕ್ಕೆ ಆತ ಪ್ರಶ್ನಿಸಿದ್ದಾನೆ. ನೀವು ಈ ರೀತಿ ತಡಮಾಡಿದರೆ, ಗ್ರಾಹಕರಿಗೆ ತಲುಪಿಸುವುದು ಕೂಡ ವಿಳಂಬವಾಗುತ್ತಿದೆ ಎಂದಿದ್ದ. ಇದರಿಂದ ಸಿಟ್ಟಾದ ಮಹಿಳಾ ಸಿಬ್ಬಂದಿ ಆತನ ಮೇಲೆ ದಬ್ಬಾಳಿಕೆ ನಡೆಸಿದ್ದಾಳೆ.  ಪರಸ್ಪರ ಮಾತಿಗೆ ಮಾತು ಬೆಳೆದು ಡೆಲಿವರಿ ಬಾಯ್​ನ‌ ಕುತ್ತಿಗೆ ಪಟ್ಟಿ ಹಿಡಿದ ಮಹಿಳೆ ಆತನನ್ನು ಎಳೆದೊಯ್ದ ರೆಸ್ಟೋರೆಂಟ್​ನಿಂದ ಹೊರದಬ್ಬಿದ್ದಾಳೆ.

ಘಟನೆ ಬಳಿಕ ಸಂಜಯ್​ ಬೆನ್ನಿಗೆ ನಿಂತ ಕನ್ನಡಪರ ಸಂಘಟನೆಗಳು ರೆಸ್ಟೋರೆಂಟ್ ಮಾಲೀಕರನ್ನು ಸಂಪರ್ಕಿಸಿವೆ. ಮ್ಯಾನೇಜರ್ ಪ್ರಶಾಂತ್ ಎಂಬುವರನ್ನು ಭೇಟಿಯಾಗಿ‌ ಮಹಿಳೆಯನ್ನು ವಜಾಗೊಳಿಸಲು ಆಗ್ರಹಿಸಿವೆ. ಮಹಿಳೆಯ ಕೃತ್ಯ ಗಮನಿಸಿದ ಮ್ಯಾನೇಜರ್​ ಮಹಿಳೆಯನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ. ಅಲ್ಲದೆ, ಡೆಲಿವರಿ‌ ಬಾಯ್​ ಗೆ ಒಂದು ದಿನದ ಸಂಬಳ‌ವನ್ನು ಸಂಘಟನೆಗಳು ಕೊಡಿಸಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಮ್ಮು-ಕಾಶ್ಮೀರದ ಅನಂತ್‌ ನಾಗ್‌ನಲ್ಲಿ ಎನ್‌ ಕೌಂಟರ್: ಓರ್ವ ಉಗ್ರನ ಹತ್ಯೆ

ಮೀನುಗಾರನನ್ನು ತಲೆಕೆಳಗಾಗಿ ನೇತು ಹಾಕಿ ಹಲ್ಲೆ: ಆರು ಮಂದಿ ಆರೋಪಿಗಳು ಅರೆಸ್ಟ್

ಮತಾಂತರ ನಿಷೇಧ: ತಿದ್ದ ಬೇಕಿರುವುದು ಜಾತಿ ಅಸಮಾನತೆಯನ್ನು, ಸಂವಿಧಾನವನ್ನಲ್ಲ!

ಮಗುವಿನ ಹುಟ್ಟುಹಬ್ಬ ಮುಗಿಯುವ ಮೊದಲೇ ಮಸಣ ಸೇರಿದ ತಾಯಿ!

ಬಲವಂತ ಮತಾಂತರಕ್ಕೆ ಶಿಕ್ಷೆ ಸಂವಿಧಾನದಲ್ಲೇ ಗುರುತಿಸಲಾಗಿದ್ದು ಮತ್ತೊಂದು ಕಾಯ್ದೆ ಯಾಕೆ ಬೇಕು?: ಸಿದ್ದರಾಮಯ್ಯ

ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!

ಇತ್ತೀಚಿನ ಸುದ್ದಿ