ಮತಗಟ್ಟೆಯ ಮುಂದೆಯೇ ವಾಮಾಚಾರ ಮಾಡಿದ ಮೂಢರು!: ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಹನೂರು: ಪಟ್ಟಣದ ಉನ್ನತಿ ಕರೆಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಗೇಟಿನ ಮುಂಭಾಗ ವಾಮಾಚಾರ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಉನ್ನತಿಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 103, 104, 105 ಮೂರು ಬೂತ್ ಗಳಿದ್ದು ಗೇಟಿನ ಮುಂಭಾಗ ಕಿಡಿಗೇಡಿಗಳು ಎರಡು ಕುಡಿಕೆ ಹಾಗೂ ನಿಂಬೆಹಣ್ಣನ್ನು ಹೂತು ಹಾಕಿ, ಕಲ್ಲನ್ನು ಮುಚ್ಚಿ ಹಾಕಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೋಲಿಸ್ ವಾಹನ ಶಾಲೆಯೊಳಗೆ ತೆರಳಿದಾಗ ಕುಡಿಕೆಯ ಮೇಲಿದ್ದ ಕಲ್ಲು ಜರುಗಿದ ಸಂದರ್ಭದಲ್ಲಿ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದ್ದು ಯಾರು ವಾಮಾಚಾರ ಮಾಡಿಸಿದ್ದಾರೆ. ಯಾರು ಈ ಹೇಯ ಕೃತ್ಯ ಮಾಡಿದ್ದಾರೆ ಎಂಬುದು ಮತದಾರರಿಗೆ ಯಕ್ಷಪ್ರಶ್ನೆಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw