ತುನೀಷಿಯಾದಲ್ಲಿ ಫುಟ್ಬಾಲ್ ಲೀಗ್: ಹಮಾಸ್ ನಾಯಕ ಯಹ್ಯಾ ಸಿನ್ವಾರ್ ರ ಭಾರೀ ಗಾತ್ರದ ಬ್ಯಾನರ್ ಪ್ರದರ್ಶನ
ತುನೀಷಿಯಾದ ಫುಟ್ಬಾಲ್ ಲೀಗ್ ನಲ್ಲಿ ಹಮಾಸ್ ನಾಯಕರಾಗಿದ್ದ ಯಹ್ಯಾ ಸಿನ್ವಾರ್ ಅವರ ಭಾರಿ ಗಾತ್ರದ ಬ್ಯಾನರ್ ಅನ್ನು ಪ್ರದರ್ಶಿಸಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಈ ಸಿನ್ವರ್ ಆಗಿದ್ದಾರೆ ಎಂದು ಹೇಳಲಾಗಿದೆ.
ಇಸ್ಮಾಯಿಲ್ ಹನಿಯ ಅವರನ್ನು ಇರಾನ್ ನಲ್ಲಿ ಇಸ್ರೇಲ್ ಹತ್ಯೆ ಮಾಡಿದ ಬಳಿಕ ಸಿನ್ವಾರ್ ಅವರು ಹಮಾಸ್ ನ ನೇತಾರರಾಗಿ ಘೋಷಿಸಲ್ಪಟ್ಟಿದ್ದರು. 2024 ಅಕ್ಟೋಬರ್ 16 ರಂದು ಇಸ್ರೇಲ್ ಸೇನೆ ಸಿನ್ವಾರ್ ಅವರನ್ನು ಹತ್ಯೆಗೈದಿತ್ತು.
2024ರ ಅರಬ್ ಪರ್ಸನಾಲಿಟಿ ಆಫ್ ದ ಇಯರ್ ಪುರಸ್ಕಾರವನ್ನು ಇದೇ ಸಿನ್ವಾರ್ ಪಡೆದಿದ್ದರು. ಈಜಿಪ್ಟಿನ ನ್ಯೂಸ್ ನೆಟ್ವರ್ಕ್ ಆಗಿರುವ ರಾಜ್ದ್ ನಡೆಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಯಹ್ಯಾ ಸಿನ್ವಾರ್ ಅವರನ್ನು ಈ ಪುರಸ್ಕಾರಕ್ಕೆ ಜನರು ಆಯ್ಕೆ ಮಾಡಿದ್ದರು ಈ ಜನಾಭಿಪ್ರಾಯ ಸಂಗ್ರಹದಲ್ಲಿ ಮೂರು ಲಕ್ಷ ಮಂದಿ ಭಾಗಿಯಾಗಿದ್ದರು. ಇವರಲ್ಲಿ 85 ಶೇಕಡಕ್ಕಿಂತಲೂ ಅಧಿಕ ಮಂದಿ ಸಿನ್ವಾರ್ ಅವರನ್ನು 2024ರ ವ್ಯಕ್ತಿತ್ವವಾಗಿ ಗುರುತಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj