ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಸೇತುವೆ: ಮೇಯರ್ ಸಹಿತ 8 ಮಂದಿಗೆ ಗಾಯ! - Mahanayaka
11:19 PM Wednesday 5 - February 2025

ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಸೇತುವೆ: ಮೇಯರ್ ಸಹಿತ 8 ಮಂದಿಗೆ ಗಾಯ!

mexico
09/06/2022

ಮೆಕ್ಸಿಕೋ: ಕಳಪೆ ಕಾಮಗಾರಿ ನಮಗೆ ಬಹಳ ಪರಿಚಿತ. ಗುತ್ತಿಗೆಯಲ್ಲಿ ಕಮಿಷನ್  ವ್ಯವಹಾರಗಳನ್ನು ಇತ್ತೀಚೆಗೆ ನಾವು ಸಾಕಷ್ಟು ಕೇಳಿದ್ದೇವೆ. ಸದ್ಯ ಯಾವುದೇ ಕಳಪೆ ಕಾಮಗಾರಿ ಬೆಳಕಿಗೆ ಬಂದರೂ ಜನರು ಥಟ್ ಅಂತ, 40% ಕಮಿಷನ್ ಎಂದು ವ್ಯಂಗ್ಯವಾಡುವುದು ಸಹಜ ಎನ್ನುವಂತಾಗಿದೆ. ಆದರೆ ಕಳಪೆ ಕಾಮಗಾರಿ ಅನ್ನೋದು ನಮ್ಮಲ್ಲಿ ಮಾತ್ರವೇ ಅಲ್ಲ. ವಿದೇಶಗಳಲ್ಲಿಯೂ ನಡೆಯುತ್ತದೆ ಎನ್ನುವುದು ಇದೀಗ ಸಾಬೀತಾಗಿದೆ.

ಹೌದು..! ಮೆಕ್ಸಿಕೋದಲ್ಲಿ ನಡೆದಿರುವ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹೊಸ ಸೇತುವೆಯ ಉದ್ಘಾಟನೆಗೆ ಬಂದ ಜನರು ನೇರವಾಗಿ ಆಸ್ಪತ್ರೆಗೆ ಸೇರುವಂತಾಗಿದೆ.

ಮೆಕ್ಸಿಕೋ ನಗರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯೊಂದು ಉದ್ಘಾಟನೆಯ ವೇಳೆಯೇ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಇಲ್ಲಿನ ಮೇಯರ್ ಸೇರಿದಂತೆ 8 ಮಂದಿಗೆ ಗಾಯವಾಗಿದೆ.

ಸೇತುವೆ ಉದ್ಘಾಟನೆ ವೇಳೆ ಮೇಯರ್ ಜೊತೆಗೆ ದೊಡ್ಡ ಜನ ಸಮೂಹ ಒಂದೇ ಬಾರಿಗೆ ಸೇತುವೆ ಮೇಲೆ ಹತ್ತಿದ್ದಾರೆ. ಇದರಿಂದಾಗಿ ಭಾರ ತಡೆಯಲಾಗದೇ ಸೇತುವೆ ನೆಲಕ್ಕೆ ಕುಸಿದು ಬಿದ್ದಿದೆ.

ಸೇತುವೆ ಕುಸಿದು ಬಿದ್ದ ವೇಳೆ ಸೇತುವೆಯಲ್ಲಿ ಸ್ಥಳೀಯ ಮೇಯರ್ ಹಾಗೂ ಅವರ ಪತ್ನಿ ಸೇರಿದಂತೆ  20ಕ್ಕೂ ಅಧಿಕ ಮಂದಿ ಜನರಿದ್ದರು. ಸುಮಾರು 10 ಅಡಿ ಎತ್ತರದಿಂದ ಜನರು ಕೆಳಗೆ ಬಿದ್ದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತರಗತಿಯಲ್ಲಿ ಸಾವರ್ಕರ್ ಫೋಟೋ: ಮಂಗಳೂರಿನ  ಕಾಲೇಜಿನಲ್ಲಿ ಮತ್ತೊಂದು ವಿವಾದ!

ಕೊನೆಗೂ ತನ್ನನ್ನು ತಾನೇ ಮದುವೆಯಾಗಿ ಸಪ್ತಪದಿ ತುಳಿದ ಯುವತಿ

ಸ್ವಾಮೀಜಿಗಳ ವೇಷ ತೊಟ್ಟು ದುಡ್ಡು ಕಲೆಕ್ಷನ್: ಮೂವರ ಬಂಧನ

ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ: ಮೆಕ್ ಡೊನಾಲ್ಡ್ಸ್ ಗೆ ವಿಧಿಸಿದ ದಂಡ ಎಷ್ಟು ಗೊತ್ತಾ?

ಇತ್ತೀಚಿನ ಸುದ್ದಿ