ಬಾಲಕಿ ಜೊತೆ ಬಲವಂತದ ಮದುವೆ: ತಾಯಿ–ಮಗನಿಗೆ 20 ವರ್ಷ ಕಠಿಣ ಶಿಕ್ಷೆ

sharan raj selwi
04/03/2023

ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ.

ತಮಿಳುನಾಡಿನ ತಿರಚಂಗೂರು ತಾಲೂಕಿನ ಶರಣ್ ರಾಜ್(25) ಹಾಗೂ ಈತನ ತಾಯಿ ಸೆಲ್ವಿ(40) ಶಿಕ್ಷೆಗೊಳಗಾದ ಅಪರಾಧಿಗಳು.  14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಬೈಕಿನಲ್ಲಿ ಹತ್ತಿಸಿಕೊಂಡು ಕರೆದೊಯ್ದು ಬಲವಂತದಿಂದ ಮದುವೆಯಾಗಿ, ಲೈಂಗಿಕ‌ ದೌರ್ಜನ್ಯ ಎಸಗಿದ್ದರಿಂದ ನ್ಯಾ. ನಿಶಾರಾಣಿ ತಾಯಿ ಹಾಗೂ ಮಗನಿಗೆ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ವಾದ–ಪ್ರತಿವಾದ ನಡೆದು ಆರೋಪಿಗಳ ವಿರುದ್ಧ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ತಾಯಿ-ಮಗನಿಗೆ ನ್ಯಾ.ನಿಶಾರಣಿ ತಲಾ 20 ವರ್ಷ ಕಠಿಣ ಶಿಕ್ಷೆ  10 ಸಾವಿರ ರೂ. ದಂಡ‌ ವಿಧಿಸಿದ್ದಾರೆ. ಜೊತೆಗೆ, ಕಾನೂನು ಸೇವಾ ಪ್ರಾಧಿಕಾರವು ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರವನ್ನು 30 ದಿನದೊಳಗೆ ಕೊಡಬೇಕೆಂದು ಆದೇಶಿಸಿದ್ದಾರೆ.  ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version