ಮಕ್ಕಳೊಂದಿಗೆ ಬಿಗ್ ಬಾಸ್ ನೋಡಬೇಡಿ ಎಂದ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶಾಸ್ತ್ರಿ

kavya shasthri
03/11/2023

ಕನ್ನಡ ಬಿಗ್ ಶೋ ಬಗ್ಗೆ ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಕಾವ್ಯಾ ಶಾಸ್ತ್ರಿ ಅವರು ಬೇಸರ ವ್ಯಕ್ತಪಡಿಸಿ ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಮಕ್ಕಳೊಂದಿಗೆ ಬಿಗ್ ಬಾದ್ ಕಾರ್ಯಕ್ರಮವನ್ನು ನೋಡಬೇಡಿ ಎಂದು ವೀಕ್ಷಕರಿಗೆ ಸಲಹೆ ಕೂಡ ನೀಡಿದ್ದಾರೆ.

ಈ ಸಲದ ಬಿಗ್ ಬಾಸ್ ಸೀಸನ್ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯುವ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣು ಮಕ್ಕಳ ಮೇಲೆ ಏಕ ವಚನ, ಬಳಕೆ ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು, ಹೆದರಿಸುವುದು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಚಿಕ್ಕಮಕ್ಕಳಿರುವ ತಂದೆ ತಾಯಂದಿರು ಇಂತಹ ಕಾರ್ಯಕ್ರಮಗಳನ್ನು ಮಕ್ಕಳ ಜೊತೆಗೆ ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ ನಾನು ಯಾವುದೇ ಕಾರ್ಯಕ್ರಮದ ವಿರೋಧಿ ಅಲ್ಲ,  ಇದು ಜಾಗೃತಿ ಮೂಡಿಸಲು ಮಾತ್ರ.  ಯಾವುದೇ ಪ್ರದರ್ಶನಗಳಾಗಲಿ  ವೀಕ್ಷಿಸಲು ಸೂಕ್ತವಾದ ವಯಸ್ಸಿನ ವರ್ಗದ ಬಗ್ಗೆ ಹಕ್ಕು ನಿರಾಕರಣೆಯೊಂದಿಗೆ ಬರುತ್ತದೆ. ಆದ್ರೆ ಅದನ್ನು ನಾವು ನಿರ್ಲಕ್ಷ್ಯಿಸುತ್ತೇವೆ ಎಂದು ಅವರು ಹೇಳಿದ್ದಾರೆ. ನಿಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸಿ ಎಂದು ಬರೆದುಕೊಂಡಿದ್ದಾರೆ.

ಕಾವ್ಯಾ ಅವರು ಬಿಗ್ ಬಾಸ್  ಸೀಸನ್ 4ರ ಸ್ಪರ್ಧಿಯಾಗಿದ್ದರು. ಇವರೊಂದಿಗೆ ಭವನ್, ರೇಖಾ, ಕಾರುಣ್ಯ, ನಿರಂಜನ್ ದೇಶಪಾಂಡೆ, ಶಾಲಿನಿ ಕೂಡ ಸ್ಪರ್ಧಿಗಳಾಗಿದ್ದರು.

ಇತ್ತೀಚಿನ ಸುದ್ದಿ

Exit mobile version