ಧರ್ಮಸ್ಥಳಕ್ಕೆ ಬಂದ ಕುಮಾರಸ್ವಾಮಿಗೆ ಬೆಳ್ಳಿಯ ರುದ್ರಾಕ್ಷಿ ಮಾಲೆ ಹಾಕಿದ ವೀರೇಂದ್ರ ಹೆಗ್ಗಡೆ

kumaraswmy
16/04/2023

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ಹಾಗೂ ಪರಿವಾರ ದೇವರ ದರ್ಶನ ಪಡೆದರು.  ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ವೀರೇಂದ್ರ ಹೆಗ್ಗಡೆಯವರು ಕುಮಾರಸ್ವಾಮಿಯವರಿಗೆ ಬೆಳ್ಳಿಯ ರುದ್ರಾಕ್ಷಿ ಮಾಲೆ ಹಾಕಿದರು.  ಈ ಸಂದರ್ಭ ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿಯವರು ಮಾತನಾಡಿ, ಜಗದೀಶ್ ಶೆಟ್ಟರ್ ಅವರ ರಾಜೀನಾಮೆ ಬಿಜೆಪಿ ಪಕ್ಷದ ಆಂತರಿಕ ಬೆಳವಣಿಗೆ ಎಂದರು.

ಅವರೊಬ್ಬ ಅನುಭವಿ ರಾಜಕಾರಣಿ. ಜನಸಂಘ ಇರುವಾಗಿನಿಂದಲೇ ಬಿಜೆಪಿಗಾಗಿ ಕೆಲಸ ಮಾಡಿದವರು. ಅವರಂಥವರೇ ಇಂತಹ ನಿರ್ಧಾರ ಕೈಗೊಳ್ಳಬೇಕಾದರೆ, ನಾನು ಬಹುಶಃ ಬಿಜೆಪಿಯಲ್ಲಿ ನಡೆಯಬೇಕಾದ ಡಿಎನ್ ಎ ಬಗ್ಗೆ ಮಾತನಾಡಿದ್ದೆ. ಬಹುಶಃ ಅದು ಈಗಿನ ಬಿಜೆಪಿಯೊಳಗಿನ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ನನ್ನ ಅನಿಸಿಕೆ ಎಂದರು.

ಜಗದೀಶ್ ಶೆಟ್ಟರ್ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ. ನಮಗೆ ಅಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ. ಸಣ್ಣವರು ಯಾರಾದರೂ ಬಂದರೆ ಪಕ್ಷದೊಳಗಡೆ ಸೇರಿಸುತ್ತೇವೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version