ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ನ ಕಾರು ಅಪಘಾತ
30/12/2020
ಭೋಪಾಲ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕಾರು ಅಪಘಾತವಾಗಿದ್ದು, ಪರಿಣಾಮವಾಗಿ ಓರ್ವ ಗಾಯಗೊಂಡಿದ್ದು, ಅಜರುದ್ಧೀನ್ ಕುಟುಂಬಕ್ಕೆ ಯಾವುದೇ ಹಾನಿಯಾಗಿಲ್ಲ.
ಹೊಸ ವರ್ಷಾಚರಣೆ ಮಾಡುವ ಉದ್ದೇಶದಿಂದ ಅಜರುದ್ದಿನ್ ತಮ್ಮ ಕುಟುಂಬದೊಂದಿಗೆ ರಣಥಂಬೋರ್ ಗೆ ಇಂದು ಬೆಳಗ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾಜಸ್ಥಾನದ ಸುರ್ವಾಲ್ ಬಳಿ ಈ ಅಪಘಾತ ಸಂಭವಿಸಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಓರ್ವನಿಗೆ ಘಟನೆಯಲ್ಲಿ ಗಾಯವಾಗಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಅಜರುದ್ದೀನ್ ಹಾಗೂ ಕುಟುಂಬಕ್ಕೆ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ .