ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಸಂಸದ: ಬಿಜೆಪಿ ಬಲ ವೃದ್ಧಿ ಎಂದ ನಳಿನ್ ಕುಮಾರ್ ಕಟೀಲ್
ಬೆಂಗಳೂರು: ನರೇಂದ್ರ ಮೋದಿಯವರ ಆಡಳಿತ, ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವವನ್ನು ಒಪ್ಪಿ ಶಿವರಾಮೇಗೌಡರು ಮತ್ತು ಇತರರು ಪಕ್ಷ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಕಲ್ಯಾಣ ಕರ್ನಾಟಕ, ಹಳೆ ಮೈಸೂರು, ಕಿತ್ತೂರು ಕರ್ನಾಟಕ ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತವನ್ನು ಜಗದ್ವಂದ್ಯ ಮಾಡುವ ರಾಜಕಾರಣ ನಮ್ಮದು. ಬೇರೆ ಪಕ್ಷಗಳು ಪರಿವಾರವಾದ, ಕುಟುಂಬವಾದದಲ್ಲಿ ನಂಬಿಕೆ ಇಟ್ಟಿವೆ ಎಂದರು.
ಬಿಜೆಪಿ ಬಲ ರಾಜ್ಯದಾದ್ಯಂತ ವೃದ್ಧಿಸಿದೆ. ಮುಂದಿನ ಸರಕಾರ ನಮ್ಮದೇ. ಆ ಬಹುಮತದ ಸರಕಾರಕ್ಕೆ ಸ್ವಾಗತ ಕೋರೋಣ ಎಂದು ತಿಳಿಸಿದರು.ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರು ಮಾತನಾಡಿ, ನಾನು ಕಾಂಗ್ರೆಸ್- ಜೆಡಿಎಸ್ನಲ್ಲಿ ಹೋರಾಟ ಮಾಡಿ ಬೆಳೆದವರು. ಇವೆರಡೂ ಪಕ್ಷಗಳಲ್ಲಿ ಕಾರ್ಯಕರ್ತರು ಉಸಿರುಗಟ್ಟಿ ಕೆಲಸ ಮಾಡಬೇಕಿದೆ. ನರೇಂದ್ರ ಮೋದಿಜಿ ಅವರ ನಾಯಕತ್ವ ಮತ್ತು ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದರು.
ಬಿಜೆಪಿಯ ಹಲವು ನಾಯಕರು ಮಂಡ್ಯದಲ್ಲಿ ಪಕ್ಷ ಕಟ್ಟಲು ಆಹ್ವಾನಿಸಿದ್ದಾರೆ. ಎರಡೂ ಪಕ್ಷಗಳ ದೊಂಬರಾಟ ನಿಲ್ಲಿಸಲು ಬಿಜೆಪಿಯಿಂದ ಸಾಧ್ಯ. ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಶಕ್ತಿಯಾಗಿ ನಾವು ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ. ಸುಧಾಕರ್, ಗೋಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಜಿಲ್ಲಾಧ್ಯಕ್ಷರಾದ ಉಮೇಶ್, ಸಂಜಯ್ ಪಾಟೀಲ್ ಮತ್ತಿತರರು ಇದ್ದರು.
ಪಕ್ಷ ಸೇರ್ಪಡೆಗೊಂಡವರ ವಿವರ:
ಮಾಜಿ ಸಂಸದ ಶಿವರಾಮೇಗೌಡ, ಪುತ್ರ ಚೇತನ್ಗೌಡ, ಕಲಬುರಗಿ ಗುರುಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ವೈದ್ಯ ಯೋಗೇಶ್ ಬೆಸ್ತರ್, ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಮುಖಂಡ ಚಿಕ್ಕರೇವಣ್ಣ ಅವರು ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆಗೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw