30 ವರ್ಷದಲ್ಲೇ ಮೃತಪಟ್ಟ  WWE ಕುಸ್ತಿಪಟು ಸಾರಾ ಲೀ - Mahanayaka
8:16 PM Wednesday 11 - December 2024

30 ವರ್ಷದಲ್ಲೇ ಮೃತಪಟ್ಟ  WWE ಕುಸ್ತಿಪಟು ಸಾರಾ ಲೀ

sara lee
08/10/2022

ನವದೆಹಲಿ: ಮನರಂಜನೆ   ಕುಸ್ತಿ WWE ಕುಸ್ತಿಪಟು ಸಾರಾ ಲೀ ಶುಕ್ರವಾರ ನಿಧನರಾಗಿದ್ದು, 30 ವರ್ಷ ವಯಸ್ಸಿನಲ್ಲೇ ಅವರು ಸಾವನ್ನಪ್ಪಿದ್ದು, ಕುಸ್ತಿ ಜಗತ್ತಿಗೆ ದೊಡ್ಡ ಶಾಕ್ ಆಗಿದೆ.

ಇನ್ನೂ ಸಾರಾ ಲೀ ಅವರ ತಾಯಿ ತಮ್ಮ ಮಗಳ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದು, ನಮ್ಮ ಸಾರಾ ಏಸುವಿನೊಂದಿಗೆ ಇರಲು ಹೋಗಿದ್ದಾರೆ ಎಂದು ಭಾರವಾದ ಹೃದಯಗಳೊಂದಿಗೆ  ಹೇಳಲು ನಾವು ಬಯಸುತ್ತೇವೆ.  ನಾವೆಲ್ಲರೂ ಇದರಿಂದ ಆಘಾತಕ್ಕೊಳಗಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಾರಾ ಲೀ ಅವರ ಸಾವಿನ ಕಾರಣ ನಿಗೂಢವಾಗಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಮತ್ತೊಂದೆಡೆ, ಸಾರಾ ಲೀ ಅವರು ಮೂಗಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು ಎಂದೂ ಹೇಳಲಾಗಿದೆ.

ಇನ್ನೂ ಸಾರಾ ಲೀ ಅವರ ಸಾವನ್ನು WWE ಕೂಡ ದೃಢಪಡಿಸಿ, ಸಂತಾಪ ಸೂಚಿಸಿದೆ.  ಸಾರಾ ಲೀ ನಿಧನದ ಬಗ್ಗೆ ತಿಳಿದು ದುಃಖವಾಯಿತು. ಮಾಜಿ ಟಫ್ ಎನಫ್ ವಿಜೇತರಾಗಿ ಲೀ ಕ್ರೀಡಾ—ಮನರಂಜನಾ ಜಗತ್ತಿನಲ್ಲಿ ಅನೇಕರಿಗೆ  ಸ್ಪೂರ್ತಿಯಾಗಿ ಸೇವೆ ಸಲ್ಲಿಸಿದ್ದರು ಎಂದು WWE ಸಂತಾಪ ಸೂಚಿಸಿದೆ. ಸಾರಾ ಲೀ ಅವರು ಪತಿ ವೆಸ್ಟಿನ್ ಬ್ಲೇಕ್ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ