ನಾಲ್ಕು ದನಗಳನ್ನು ಗುಂಡು ಹಾರಿಸಿ ಹತ್ಯೆ: 10ರಿಂದ 15 ದನಗಳಿಗೆ ಗುಂಡೇಟಿನಿಂದ ಗಾಯ! - Mahanayaka
1:55 PM Saturday 21 - September 2024

ನಾಲ್ಕು ದನಗಳನ್ನು ಗುಂಡು ಹಾರಿಸಿ ಹತ್ಯೆ: 10ರಿಂದ 15 ದನಗಳಿಗೆ ಗುಂಡೇಟಿನಿಂದ ಗಾಯ!

cow
30/09/2023

ಕೊಲ್ಲೂರು: ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಯಿಂದ ಶೂಟ್ ಮಾಡಿ ನಾಲ್ಕು ದನಗಳನ್ನು ಹತ್ಯೆಗೈದಿರುವ ಆರೋಪದಡಿ ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡುವಿನ ನರಸಿಂಹ ಎಂಬಾತನ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು ಒಂದು ತಿಂಗಳಿನಿಂದ ಅಂಗಡಿಜೆಡ್ಡು ಪರಿಸರದಲ್ಲಿ 3 ದನಗಳು ಸತ್ತಿದ್ದು, 10–15 ದನಗಳು ಗಾಯಗೊಂಡು ಹುಳವಾಗಿದೆ. ಇದಕ್ಕೆಲ್ಲಾ ನರಸಿಂಹ ಎಂಬಾತನೇ ಕಾರಣವಾಗಿದ್ದಾನೆ ಎಂದು ಸ್ಥಳೀಯರಾದ ಗುಲಾಬಿ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.

ಈತನಲ್ಲಿ ಸ್ಥಳೀಯರು ವಿಚಾರಿಸಿದಾಗ ಈಗಾಗಲೇ 4 ದನವನ್ನು ಕೊಂದ್ದಿದ್ದು 10–15 ದನಗಳಿಗೆ ಕೋವಿಯಿಂದ ಹೊಡೆದಿದ್ದೇನೆ. ಇನ್ನು ಮುಂದಕ್ಕೆ ದನಗಳನ್ನು ಜಾಗ್ರತೆ ಮಾಡದೇ ಇದ್ದರೆ ದನಕ್ಕೆ ಆದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Provided by

ಇತ್ತೀಚಿನ ಸುದ್ದಿ