ವಿದ್ಯಾರ್ಥಿ ಹೋರಾಟಗಾರ ಜೈಲು ಸೇರಿ ನಾಲ್ಕು ವರ್ಷ: ಜಾಮೀನಿಗಾಗಿ ಅಲೆದಾಟ
ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರು ತಿಹಾರ್ ಜೈಲಿನಲ್ಲಿ ಕೊಳೆಯುತ್ತಿರುವುದಕ್ಕೆ ಇಂದಿಗೆ ನಾಲ್ಕು ವರ್ಷವಾಗಿದೆ. ದೇಶದ್ರೋಹದ ಆರೋಪದಲ್ಲಿ ಬಂಧಿ ತರಾಗಿರುವ ಅವರಿಗೆ ಈವರೆಗೆ ಜಾಮೀನು ಸಿಕ್ಕಿಲ್ಲ.
2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಮುಖ್ಯ ಸೂತ್ರಧಾರಿ ಇವರು ಎಂದು ಪೊಲೀಸರು ಆರೋಪಿಸಿ ಜೈಲಿಗಟ್ಟಿದ್ದಾರೆ. ಯುಎಪಿಎಯಂತಹ ಪ್ರಕರಣಗಳಿಗೂ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್ ಈ ಹಿಂದೆ ಹೇಳಿದೆಯಾದರೂ ಉಮ್ಮರ್ ಖಾಲಿ ದ್ ಗೆ ಮಾತ್ರ ಯಾವ ನ್ಯಾಯಾಲಯದಿಂದಲೂ ಜಾಮೀನು ಸಿಕ್ಕಿಲ್ಲ. ಜಾಮಿನಿಗಾಗಿ ಅವರು ಹಲವು ಬಾರಿ ನ್ಯಾಯಾಲಯಗಳ ಬಾಗಿಲು ತಟ್ಟಿದ್ದಾರೆ.
ಆದರೆ ಈ ಆರೋಪವನ್ನೆಲ್ಲ ಉಮ್ಮರ್ ಖಾಲಿದ್ ನಿರಾಕರಿಸಿದಾರೆ. ಸಾಮಾನ್ಯ ಪ್ರತಿಭಟನೆಯಲ್ಲಿ ತಾನು ಭಾಗವಹಿಸಿದ್ದೆ ಎಂದವರು ಹೇಳಿದ್ದಾರೆ. ಗಲಭೆ ನಡೆದ ತಿಂಗಳ ಒಳಗೆ ದೆಹಲಿ ಪೊಲೀಸರು 2500 ರಷ್ಟು ಕ್ಕಿಂತಲು ಅಧಿಕ ಮಂದಿಯನ್ನು ವಿವಿಧ ಪ್ರಕರಣಗಳ ಅಡಿಯಲ್ಲಿ ಬಂಧಿಸಿದ್ದರು. ಇವರಲ್ಲಿ 2000 ದಷ್ಟು ಮಂದಿಗೆ ಕೆಳ ಕೋರ್ಟುಗಳು ಜಾಮೀನು ನೀಡಿವೆ.
ಪಕ್ಷಪಾತಿತನದ ಕ್ರಮಕ್ಕಾಗಿ ಈ ಕೋರ್ಟುಗಳು ಪೊಲೀಸರನ್ನು ತರಾಟೆಗೂ ಎತ್ತಿಕೊಂಡದ್ದಿದೆ. ಆದರೆ ಉಮರ್ ಖಾಲಿದ್ ಪ್ರಕರಣ ಇನ್ನೂ ವಿಚಾರಣೆಗೆ ಬಂದಿಲ್ಲ. 2020ರ ಪ್ರಕರಣಕ್ಕೆ ಸಂಬಂಧಿಸಿ 17 ಮಂದಿಯ ಮೇಲೆ ಪೊಲೀಸರು ಗುರುತರ ಆರೋಪ ಹೊರಿಸಿದ್ದರು. ಇವರಲ್ಲಿ ಹಲವರಿಗೆ ಜಾಮೀನು ಸಿಕ್ಕಿದೆ. 2024ರ ಫೆಬ್ರವರಿಯಲ್ಲಿ ನಡೆಸಲಾದ ಲೆಕ್ಕದಂತೆ 11 ತಿಂಗಳಲ್ಲಿ 14 ಬಾರಿ ಸುಪ್ರೀಂ ಕೋರ್ಟ್ ಇವರ ವಿಚಾರಣೆಯನ್ನು ಮುಂದೂಡಿದೆ. ಇದೇ ವೇಳೆ ದೆಹಲಿ ಗಲಭೆ ನಡೆಯುವ ವೇಳೆ ಉಮರ್ ಖಾಲಿದ್ ದೆಹಲಿಯಲ್ಲಿ ಇರಲಿಲ್ಲ, ಅವರು ಮಹಾರಾಷ್ಟ್ರದ ಅಮರಾವತಿಯಲ್ಲಿದ್ದರು ಎಂಬುದನ್ನು ದಾಖಲೆ ಸಮೇತ ಕೋರ್ಟಿನ ಮುಂದೆ ಹೇಳಿಯೂ ಅವರಿಗೆ ಜಾಮೀನು ಸಿಗುತ್ತಿಲ್ಲ ಅನ್ನುವುದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth