ಫ್ರಾನ್ಸ್ ಒಲಿಂಪಿಕ್ಸ್: ಹಿಜಾಬ್ ನ ಬದಲು ತಲೆಗೆ ಟೊಪ್ಪಿ ಧರಿಸಲು ಅನುಮತಿ - Mahanayaka
8:02 PM Saturday 7 - September 2024

ಫ್ರಾನ್ಸ್ ಒಲಿಂಪಿಕ್ಸ್: ಹಿಜಾಬ್ ನ ಬದಲು ತಲೆಗೆ ಟೊಪ್ಪಿ ಧರಿಸಲು ಅನುಮತಿ

26/07/2024

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಿಜಾಬ್ ನ ಬದಲು ತಲೆಗೆ ಟೊಪ್ಪಿ ಧರಿಸಿ ಆಥ್ಲಿಟ್ ಗಳು ಭಾಗವಹಿಸುವುದಕ್ಕೆ ಒಲಿಂಪಿಕ್ಸ್ ಕಮಿಟಿ ಅನುಮತಿ ನೀಡಿದೆ. ಅಥ್ಲಿಟ್ ಗಳು ಹಿಜಾಬ್ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಫ್ರೆಂಚ್ ಒಲಿಂಪಿಕ್ಸ್ ಸಮಿತಿ ಈ ಮೊದಲು ನಿಷೇಧ ಹೇರಿತ್ತು. ಫ್ರೆಂಚ್ ಅಥ್ಲೆಟ್ ಸಂಕಂಬ ಸಿಲ್ಕ್ ಅವರು ಟೋಪಿ ಧರಿಸಿ ಭಾಗವಹಿಸಬಹುದು ಎಂದು ಸಮಿತಿ ಹೇಳಿದೆ. ಒಲಿಂಪಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಟೋಪಿ ಧರಿಸಿ ಭಾಗವಹಿಸಬಹುದು ಎಂದು ಫ್ರೆಂಚ್ ಅಥ್ಲೆಟ್ ಗೆ ತಿಳಿಸಲಾಗಿದ್ದು ಅವರು ಅದನ್ನು ಅಂಗೀಕರಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.

ಈ ವಿಷಯವನ್ನು ಸಿಲಕ್ ಕೂಡ ಒಪ್ಪಿಕೊಂಡಿದ್ದಾರೆ. ಒಲಂಪಿಕ್ಸ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾವು ನಿರ್ಧರಿಸಿದ್ದೇವೆ. ಆರಂಭದಿಂದ ಈವರೆಗೆ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು 26 ವರ್ಷದ ಸಿಲಕ್ ತಿಳಿಸಿದ್ದಾರೆ.

400 ಮೀಟರ್ ಮಹಿಳಾ ಮಿಕ್ಸೆಡ್ ರಿಲೇ ಟೀಮಿನ ಭಾಗವಾಗಿರುವ ಸಿಲಕ್ ಅವರಿಗೆ ಫ್ರಾನ್ಸ್ ಒಲಿಂಪಿಕ್ಸ್ ಸಮಿತಿ ವಿಧಿಸಿರುವ ಶರತ್ತು ತೀವ್ರ ವಿವಾದವನ್ನು ಹುಟ್ಟು ಹಾಕಿತ್ತು ಮತ್ತು ಜಾಗತಿಕ ಗಮನವನ್ನು ಸೆಳೆದಿತ್ತು. ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸುವುದಕ್ಕೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ, ಆದರೆ ಹಿಜಾಬ್ ಧರಿಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಇಲ್ಲ ಎಂದು ಫ್ರಾನ್ಸ್ ಒಲಿಂಪಿಕ್ ಸಮಿತಿ ಸಿಲಕ್ ಗೆ ತಿಳಿಸಿತ್ತು.


Provided by

ತಸಿಲಕ್ ಅವರು ಈ ಸೂಚನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಾತ್ರ ಅಲ್ಲ ಅಮೆರಿಕ ಸಹಿತ ವಿವಿಧ ರಾಷ್ಟ್ರಗಳ ಮಾನವ ಹಕ್ಕು ಸಮಿತಿಗಳು ಈ ಸೂಚನೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದವು. ‌ಓರ್ವ ಮಹಿಳೆ ಏನನ್ನು ಧರಿಸಬೇಕು ಮತ್ತು ಏನನ್ನು ಧರಿಸಬಾರದು ಅನ್ನೋದನ್ನ ಇತರರು ನಿರ್ಧರಿಸುವಂತಿಲ್ಲ ಎಂದು ಕೂಡ ಅಮೆರಿಕಾದ ಮಾನವ ಹಕ್ಕು ಆಯೋಗದ ಅಧ್ಯಕ್ಷರು ತಿಳಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ