ಉಚಿತ ಆಟೋ: ಕೆಇಎ ಪರೀಕ್ಷಾರ್ಥಿಗಳಿಗೆ ಎಎಪಿಯಿಂದ ಸೌಲಭ್ಯ - Mahanayaka
8:27 PM Wednesday 5 - February 2025

ಉಚಿತ ಆಟೋ: ಕೆಇಎ ಪರೀಕ್ಷಾರ್ಥಿಗಳಿಗೆ ಎಎಪಿಯಿಂದ ಸೌಲಭ್ಯ

auto
28/10/2023

ಬೆಂಗಳೂರು: ನಿಗಮ-ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುತ್ತಿರುವ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಆಮ್‌ ಆದ್ಮಿ ಪಕ್ಷದ ಯುವ ಘಟಕ ಉಚಿತ ಆಟೋ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿದೆ.

ವಕೀಲ ಹಾಗೂ ಆಮ್‌ ಆದ್ಮಿ ಪಕ್ಷದ ರಾಜ್ಯ ಯುವಘಟಕದ ಅಧ್ಯಕ್ಷ ಲೋಹಿತ್‌ ಜಿ. ಹನುಮಾಪುರ ಅವರ ನೇತೃತ್ವದಲ್ಲಿ ನೂರಕ್ಕು ಹೆಚ್ಚು ಆಟೋಗಳು ನಗರದಾದ್ಯಂತ ಉಚಿತ ಪ್ರಯಾಣ ಸೌಲಭ್ಯವನ್ನು ನೀಡುತ್ತಿವೆ.

ಶನಿವಾರ ಬೆಂಗಳೂರು ನಗರದಾದ್ಯಂತ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಕಾಲದಲ್ಲಿ ಉಚಿತ ಸೌಲಭ್ಯ ಸಿಕ್ಕಿರುವುದರಿಂದ ವಿದ್ಯಾರ್ಥಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸೌಲಭ್ಯ ಅಕ್ಟೋಬರ್‌ 29, ಭಾನುವಾರವು ಲಭ್ಯವಿರುವುದಾಗಿ ಲೋಹಿತ್‌ ಜಿ. ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ