“ನನಗೂ ಫ್ರೀ…” ಅಂತ ಬಸ್ ಗಾಜು ಒಡೆದು ಹಾಕಿದ ಹೆಣ್ಣಾನೆ!

ಚಾಮರಾಜನಗರ: ಗ್ಯಾರಂಟಿ ಯೋಜನೆ ಕೇವಲ ನಿಮಗೇ ಏಕೆ ನನಗೂ ಬೇಕು ಎಂಬ ರೀತಿ ಆನೆಯೊಂದು ಬಸ್ಸಿಗೆ ಅಡ್ಡಲಾಗಿ ಬಂದು ಗಾಜನ್ನು ಪುಡಿ ಮಾಡಿರುವ ಘಟನೆ ತಮಿಳುನಾಡಿನ ಬಣ್ಣಾರಿ ಬಳಿ ನಡೆದಿದೆ.
ಸಾರಿಗೆ ಸಂಸ್ಥೆ ಬಸ್ ಚಾಮರಾಜನಗರದ ಗುಂಡ್ಲುಪೇಟೆ ಡಿಪೋಗೆ ಸೇರಿದ್ದು ಮೈಸೂರು-ಕೊಯಮತ್ತೂರಿಗೆ ತೆರಳುವಾಗ ಬಣ್ಣಾರಿ ಬಳಿ ಏಕಾಏಕಿ ಪ್ರತ್ಯೇಕ್ಷಗೊಂಡ ಹೆಣ್ಣಾನೆಯೊಂದು ಸಾರಿಗೆ ಬಸ್ ನ ಗಾಜನ್ನು ಒಡೆದು ಹಾಕಿದೆ.
ಈ ಸಂಬಂಧ ಕೆಎಸ್ ಆರ್ ಟಿಸಿ ಚಾಮರಾಜನಗರ ವಿಭಾಗದ ಡಿಸಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು ಪ್ರಯಾಣಿಕರು, ಸಿಬ್ಬಂದಿಗೆ ಯಾವುದೇ ಗಾಯ, ಪ್ರಾಣಾಪಾಯ ಸಂಭವಿಸಿಲ್ಲ, 10 ಸಾವಿರ ರೂ. ನಷ್ಟು ನಷ್ಟವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳು ಕೇವಲ ಮನುಷ್ಯರಿಗೆ ಏಕೆ ನಮಗೂ ಬೇಕು ಎಂದು ಆನೆ ಗಾಜು ಒಡೆದಿದೆ ಎಂಬ ಅಡಿಬರಹದಲ್ಲಿ ಫೋಟೋವೊಂದು ವೈರಲ್ಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw