IIT ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿಯೊಂದಿಗೆ ಉಚಿತ ಇಂಟರ್ನಶಿಪ್: ಅರ್ಜಿ ಸಲ್ಲಿಸೋದು ಹೇಗೆ?

Free Internship Program in IIT Dharwad 2025 – ಉನ್ನತ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಹೆಸರಾದ IIT (Indian Institute of Technology) ಧಾರವಾಡದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಅವಶ್ಯ ಹಾಗೂ ಕಡ್ಡಾಯವಾಗಿ ಬೇಕಾಗಿರುವ ಇಂಟರ್ನಶಿಪ್ ಅನ್ನು ನೀಡಲು ಅರ್ಜಿ ಆಹ್ವಾನಿಸಿದೆ.
ಇದಕ್ಕೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಕೇವಲ ಮಾರ್ಚ್ 23ನೇ ತಾರೀಕಿನವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾದವರಿಗೆ ಉಚಿತ ಇಂಟರ್ನಶಿಪ್ ನೊಂದಿಗೆ ಉಚಿತ ಊಟ ವಸತಿ ಸೌಲಭ್ಯವು ಕೂಡ ಇರಲಿದೆ. ಹಾಗಿದ್ದರೆ ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲಾ ಅರ್ಜಿ ಸಲ್ಲಿಸಬಹುದೇ ಎಂಬ ಮಾಹಿತಿ ಇಲ್ಲಿದೆ..
IIT ಧಾರವಾಡ ಉಚಿತ ಇಂಟರ್ನಶಿಪ್ ಯೋಜನೆಯ ಕುರಿತು :
ಇದು 1 ರಿಂದ 2 ತಿಂಗಳ ಪ್ರೋಗ್ರಾಮ್ ಆಗಿದ್ದು, ಪ್ರಸ್ತುತ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾಗಿದೆ. ನಿಗದಿತ ಅವಧಿಯ ಈ ಇಂಟರ್ನಶಿಪ್ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.
ಯಾರು ಇದಕ್ಕೆ ಅರ್ಜಿ ಸಲ್ಲಿಸಬಹುದು?
ಇದಕ್ಕೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಪ್ರಸ್ತುತ ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ, ಗಣಿತ, ಹುಮಾನಿಟೀಸ್ ಅಥವಾ ಇದಕ್ಕೆ ಸಂಬಂದಿಸಿದ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿರಬೇಕು.
ಇದರ ಜೊತೆಗೆ ಇಂದಿನ ಸೆಮಿಸ್ಟರ್ನಲ್ಲಿ ಕನಿಷ್ಠ 6.5 CGPA ಅಥವಾ 65% ಅಂಕಗಳನ್ನು ಪಡೆದು ಎಲ್ಲಾ ವಿಷಯಗಳಲ್ಲೂ ಪಾಸಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :
* ಇತ್ತೀಚಿನ ಭಾವಚಿತ್ರ
* ಇತ್ತೀಚಿನ ಬಯೋಡೇಟಾ ಅಥವಾ ರೇಸುಮೆ
* ಹಿಂದಿನ ಸೆಮಿಸ್ಟರ್ ನ ಅಂಕಪಟ್ಟಿ
* ಶಾಲಾ ದಾಖಲಾತಿ ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲಿಕ್ಕೆ ಕೊನೆಯ ದಿನಾಂಕ — 23 ಮಾರ್ಚ್ 2025
ಅರ್ಜಿ ಸಲ್ಲಿಸುವ ಅಧಿಕೃತ ಜಾಲತಾಣದ ಲಿಂಕ್:
https://www.buddy4study.com/scholarship/iit-dharwad-summer-internship-program
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: