ಟ್ರಂಪ್ ರ ನಿಲುವುಗಳನ್ನು ಪ್ರಶ್ನಿಸಿದ್ದ ಫ್ರೆಂಚ್ ತಜ್ಞರಿಗೆ ಅಮೆರಿಕ ಪ್ರವೇಶ ನಿಷೇಧ

ಡೊನಾಲ್ಡ್ ಟ್ರಂಪ್ ಅವರ ನಿಲುವುಗಳನ್ನು ಪ್ರಶ್ನಿಸಿದ್ದ ಫ್ರೆಂಚ್ ತಜ್ಞರಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಮಾರ್ಚ್ 9ರಂದು ಅಮೆರಿಕದಲ್ಲಿ ನಡೆಯಲಿರುವ ಕಾನ್ಫರೆನ್ಸ್ ನಲ್ಲಿ ಭಾಗಿಯಾಗುವುದಕ್ಕಾಗಿ ಇವರು ಅಮೆರಿಕಕ್ಕೆ ಬಂದಿದ್ದರು. ಇವರ ಮೊಬೈಲನ್ನು ಪರಿಶೀಲಿಸಿದಾಗ ಟ್ರಂಪ್ ನೀತಿಯನ್ನು ಪ್ರಶ್ನಿಸಿ ತನ್ನ ಗೆಳೆಯರಿಗೆ ಇವರು ಸಂದೇಶ ರವಾನಿಸಿರುವುದು ಪತ್ತೆಯಾಗಿದೆ. ಟ್ರಂಪ್ ಅವರ ಸಂಶೋಧನಾ ನೀತಿಯನ್ನು ಇವರು ವಿಮರ್ಷಿಸಿದ್ದರು.
ಘಟನೆಯನ್ನು ಫ್ರಾನ್ಸ್ ಸರಕಾರ ತೀವ್ರವಾಗಿ ಖಂಡಿಸಿದೆ.
ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ನ ಭಾಗವಾಗಿ ಬಾಹ್ಯಾಕಾಶ ಸಂಶೋಧನೆಯ ನಿಮಿತ್ತ ಅವರು ಅಮೆರಿಕಕ್ಕೆ ಹೋಗಿದ್ದರು.
ಪರಿಶೀಲನೆಯ ಮಧ್ಯೆ ಅಧಿಕಾರಿಗಳು ಇವರ ಕಂಪ್ಯೂಟರ್ ಮತ್ತು ಮೊಬೈಲ್ ಫೋನನ್ನು ಪರಿಶೀಲಿಸಿದ್ದು ಅತ್ಯಂತ ಕೆಟ್ಟದಾಗಿ ಅವರೊಂದಿಗೆ ವರ್ತಿಸಿದ್ದಾರೆ. ಗುಪ್ತಚರ ಸಂಸ್ಥೆಯಾದ ಎಫ್ ಬಿ ಐ ಅವರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಆ ಬಳಿಕ ತಿಳಿಸಲಾಗಿದೆ ಆ ಬಳಿಕ ಅವರನ್ನು ಗಡಿಪಾರು ಮಾಡಲಾಗಿದೆ. ಇದು ಅತ್ಯಂತ ಖಂಡನೀಯ ಎಂದು ಫ್ರೆಂಚ್ ಸರಕಾರ ಹೇಳಿದೆ.
ಸಂಶೋಧನೆಗೆ ಸಂಬಂಧಿಸಿ ಟ್ರಂಪ್ ನಿಲುವನ್ನು ತನ್ನ ಗೆಳೆಯರ ಜೊತೆ ಈ ಸಂಶೋಧಕರು ವಿಮರ್ಶಿಸಿರುವುದು ಮೊಬೈಲ್ ಫೋನ್ನಲ್ಲಿ ದಾಖಲಾಗಿದ್ದು ಅದನ್ನು ಪರಿಗಣಿಸಿ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj