ತಲೆಬೇನೆ: ಜಾಮೀನು ರಹಿತ ಬಂಧನ ವಾರೆಂಟ್; ವಿಜಯ್ ಮಲ್ಯಗೆ ಸಂಕಷ್ಟ - Mahanayaka

ತಲೆಬೇನೆ: ಜಾಮೀನು ರಹಿತ ಬಂಧನ ವಾರೆಂಟ್; ವಿಜಯ್ ಮಲ್ಯಗೆ ಸಂಕಷ್ಟ

02/07/2024

ಉದ್ಯಮಿ ವಿಜಯ್ ಮಲ್ಯ ವಿರುದ್ಧ ಮುಂಬೈ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿ ತೀರ್ಪು ನೀಡಿದೆ. ವಿಜಯ್ ಮಲ್ಯ ಇಂಡಿಯನ್ ಓವರ್​ಸೀಸ್ ಬ್ಯಾಂಕ್​, ಎಸ್​​ಬಿಐ ಸಹಿತ ಹಲವು ಬ್ಯಾಂಕ್​ಗಳಿಗೆ ವಂಚಿಸಿರುವ ಆರೋಪ ಇದೆ.


Provided by

2007-2012ರ ಅವಧಿಯಲ್ಲಿ ವಿಜಯ್ ಮಲ್ಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ ಲೋನ್ ಪಡೆದಿದ್ದು, ಸಾಲ ಮರುಪಾವತಿ ಮಾಡಿರಲಿಲ್ಲ. ಮಲ್ಯ 180 ಕೋಟಿ ರೂ. ಸಾಲ ಪಡೆದಿದ್ದರು. ಅದನ್ನು ಮರುಪಾವತಿ ಮಾಡಿಲ್ಲ. ಇದೀಗ ವಿಜಯ್ ಮಲ್ಯ ಬ್ಯಾಂಕ್ ಗೆ ಸಾಲ ಮರು ಪಾವತಿಸದ ಕಾರಣಕ್ಕಾಗಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.

ಮಲ್ಯ ಸೇರಿ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಜಯ್ ಮಲ್ಯಗೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಲಾಗಿದ್ದು, ಬಾಕಿ ಉಳಿದ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ವಿಜಯ್ ಮಲ್ಯ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ಗೆ ಮಾತ್ರವಲ್ಲ ಎಸ್​​ಬಿಐ ಹಾಗೂ ಇತರ ಹಲವು ಬ್ಯಾಂಕ್​ಗಳಿಂದಲೂ ಸಾಲ ಪಡೆದು ಮರುಪಾವತಿಸದೇ ವಂಚಿಸಿರುವ ಆರೋಪ ಇದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ