ನಾಯಿಗೂ ಸಿಕ್ತು ಇಟಲಿಗೆ ಹೋಗುವ ಅವಕಾಶ: ಡಾಗ್ ಕೈಗೆ ಸಿಕ್ತು ಪಾಸ್ ಪೋರ್ಟ್..!
ನಾಯಿಗೂ ವಿದೇಶ ಪ್ರವಾಸ ಹೋಗುವ ಅವಕಾಶ ಸಿಕ್ಕಿದೆ. ಹೌದು. ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ಪಾಸ್ ಪೋರ್ಟ್ ಪಡೆದುಕೊಂಡಿದೆ. ಈ ತಿಂಗಳು ಇಟಲಿಗೆ ಹೋಗಲು ಸಿದ್ಧವಾಗಿದೆ.
ಇದನ್ನು ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ಮೋತಿಯನ್ನು ದತ್ತು ಪಡೆದಿದ್ದಾರೆ. ಅವರು ಕಳೆದ ಹತ್ತು ವರ್ಷಗಳಿಂದ ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ವಾರಾಣಸಿಯಲ್ಲಿ ಈ ಬೀದಿ ನಾಯಿ ಜತೆಗೆ ಒಲವು ಬೆಳೆಸಿಕೊಂಡು ಅದನ್ನು ಸಾಕಲು ಮುಂದಾಗಿದ್ದಾರೆ. ಈ ಮೂಲಕ ಅವರು ತಮ್ಮ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆನ್‌ಲೈನ್ ಸಂದರ್ಶನವೊಂದರಲ್ಲಿ ಮಾತನಾಡಿದಾಗ ಮೋತಿ ಈ ಹಿಂದೆ ಹಿಂಸೆಗೆ ಒಳಗಾಗಿತ್ತು. ಇಲ್ಲಿನ ಜನರು ಆ ನಾಯಿಗೆ ಹೊಡೆದು ಹಿಂಸೆ ನೀಡುತ್ತಿದ್ದರು. ಈ ಕಾರಣಕ್ಕೆ ಅವರಿಂದ ಕಾಪಾಡಿ ನಾನು ಮೋತಿಯನ್ನು ಸಾಕಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಇದೀಗ ಮೋತಿಯನ್ನು ದತ್ತ ಪಡೆದು ಇಟಲಿಗೆ ಕರೆದುಕೊಂಡು ಹೋಗಲು ದೆಹಲಿಗೆ ವಿಮಾನದ ಮೂಲಕ ಹಾರಾಟ ನಡೆಸಿದ್ದಾರೆ. ಪ್ರಾಣಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವಾಗ ವ್ಯಾಕ್ಸಿನೇಷನ್ ಸೇರಿದಂತೆ ಇನ್ನೂ ಅನೇಕ ತಪಾಸಣೆ ಮತ್ತು ದಾಖಲೆ ಮಾಡಬೇಕಿದೆ. ಮೋತಿಯ ಹಿಂಭಾಗದಲ್ಲಿ ಮೈಕ್ರೋಚಿಪ್ ಕೂಡ ಅಳವಡಿಸಲಾಗುವುದು. ಮೈಕ್ರೊಚಿಪ್ ವಿಶೇಷ ಗುರುತಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇನ್ನೂ ಪ್ರಾಣಿಗಳ ಬಗ್ಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಮತ್ತು ಅದನ್ನು ಯಾವ ಉದ್ದೇಶಕ್ಕೆ ವಿದೇಶಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ವರದಿಯನ್ನು ಕೂಡ ನೀಡಬೇಕು. ಇದಕ್ಕೆ ಅಲ್ಲಿನ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ವೆರಾ ಮತ್ತು ಮೋತಿ ಅವರ ಈ ಹೃದಯಸ್ಪರ್ಶಿ ಕಥೆಗೆ ಎಲ್ಲ ಕಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಾಣಿ ಹಿಂಸೆ ಮಾಡದೆ ಅದನ್ನು ನಮ್ಮವರಂತೆ ಸಾಕುವುದಕ್ಕೆ ಇದು ಉತ್ತಮ ಉದಹಾರಣೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ವೈರಲ್ ಆಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw