ಮುಂದಿನ ಎಂದು ಕೂಗಿದ ಕಾರ್ಯಕರ್ತನಿಗೆ ವಾರ್ನಿಂಗ್ ನೀಡಿದ ಪರಮೇಶ್ವರ್

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಮುಂದಿನ ಸಿಎಂ ಎಂದು ಘೋಷಣೆ ಹಾಕಿದ ಅಭಿಮಾನಿಗೆ ಪರಮೇಶ್ವರ್ ಕೈ ಬೆರಳು ತೋರಿಸಿ ಸೈಲೆಂಟಾಗಿಯೇ ವಾರ್ನಿಂಗ್ ನೀಡಿದ್ದಾರೆ.
ತುಮಕೂರಿನ ಹೆಗ್ಗರೆ ಸಮೀಪದ ಸಿದ್ದಾರ್ಥ ನಗರದ ಜಿ.ಪರಮೇಶ್ವರ್ ಮನೆ ಬಳಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪರಮೇಶ್ವರ್ ಹುಟ್ಟುಹಬ್ಬ ಆಚರಿಸಿದ್ದರು. ಕೇಕ್ ಕತ್ತರಿಸುವ ವೇಳೆ ಕಾರ್ಯಕರ್ತನೊಬ್ಬ ಮುಂದಿನ ಸಿಎಂ ಪರಮೇಶ್ವರ್ ಎಂದು ಕೂಗಿದ್ದಾನೆ.
ಈ ವೇಳೆ ತಕ್ಷಣವೇ ಆ ರೀತಿಯ ಘೋಷಣೆ ಕೂಗದಂತೆ ಕೈ ಸನ್ನೆ ಮೂಲಕವೇ ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಎಂಬ ಚರ್ಚೆಗೆ ನಾಯಕರೇ ಬ್ರೇಕ್ ಹಾಕಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka