ಎಲ್ಲದನ್ನು ತೆಗೀಬೇಕಾ?: ಯತ್ನಾಳ್ ಗೆ ಎಚ್ಚರಿಕೆ ನೀಡಿದ ಜಿ.ಟಿ.ದೇವೇಗೌಡ
ಮೈಸೂರು: ಮುಡಾ ಭ್ರಷ್ಟಾಚಾರದಲ್ಲಿ ಜಿ.ಟಿ.ದೇವೇಗೌಡ ಪಾತ್ರ ಕೂಡ ಇದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿರುದ್ಧ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕೆಂಡಾಮಂಡಲವಾಗಿದ್ದು, ಯತ್ನಾಳ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನನ್ನ ಯೋಗ್ಯತೆ, ನನ್ನ ಆಸ್ತಿ ಬಗ್ಗೆ ನಿನಗೇನು ಗೊತ್ತು? ತಾಕತ್ ಇದ್ರೆ ನಿನ್ನ ಬಳಿ ನನ್ನದೇನಿದೆ ಬಹಿರಂಗಪಡಿಸು, ನಾನು ಭ್ರಷ್ಟಾಚಾರ ಮಾಡಿರುವುದನ್ನು ಸಾಬೀತುಪಡಿಸಿದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದಿದ್ದಾರೆ.
ನೀನು ರಾಜಕೀಯಕ್ಕೆ ಬಂದಾಗ ಏನಿತ್ತು? ನಂತರ ಹೇಗೆ ದುಂಡಗಾದೇ? ಸೌಹಾರ್ದ ಬ್ಯಾಂಕ್ ನ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಿಸಿಕೊಂಡು ಅದನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವಾ? ಎಲ್ಲದನ್ನು ತೆಗೀಬೇಕಾ? ಎಂದು ಜಿ.ಟಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಬೇರೆಯವರಿಗೆ ಮಾತನಾಡಿಸಿದಂತೆ ನನ್ನ ಜೊತೆ ಮಾತನಾಡಬೇಡ, ಇದು ನಾನು ನಿನಗೆ ಕೊಡ್ತಿರೋ ಎಚ್ಚರಿಕೆ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ಗೆ ಎಷ್ಟು ಆಸ್ತಿ ಇತ್ತು? ಈಗ ಎಷ್ಟಾಗಿದೆ ಗೊತ್ತಾ? ಇಂದು ಒಬ್ಬರನ್ನು ಹೊಗಳುವುದು, ನಾಳೆ ತೆಗಳುವುದು ಯತ್ನಾಳ್ ಚಟ, ಯಾವನೋ ಏನೋ ಹೇಳುತ್ತಾನೆ ಅಂತಾ ನನ್ನ ಬಗ್ಗೆ ಮಾತನಾಡ ಬೇಡಿ, ಹಿರಿಯ ಮನುಷ್ಯ ಇದ್ಯಾ? ಗೌರವ ಇಟ್ಕೊಂಡು ಮಾತನಾಡು ಎಂದು ಎಚ್ಚರಿಕೆ ನೀಡಿದ್ದಾರೆ.
ನಿನ್ನ ಮೇಲೆ ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಎಫ್ ಐಆರ್ ಆಗಿರಲಿಲ್ವಾ? ನೀನು ರಾಜೀನಾಮೆ ಕೊಟ್ಯಾ? ಸೌಹಾರ್ದ ಬ್ಯಾಂಕ್ ವಿಚಾರದಲ್ಲಿ ತನಿಖೆಯಾಗಲಿ ಆಗ ಗೊತ್ತಾಗುತ್ತದೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಯತ್ನಾಳ್ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: