ಭರ್ಜರಿ ಬಾಡೂಟ: ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿವಿಧ ದೇಶಗಳ ನಾಯಕರಿಗೆ ಬೆಳ್ಳಿ ಹಾಗೂ ಚಿನ್ನ ಲೇಪಿತ ತಟ್ಟೆಯಲ್ಲಿ ಊಟೋಪಚಾರ

07/09/2023

ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿವಿಧ ದೇಶಗಳ ನಾಯಕರಿಗೆ ಬೆಳ್ಳಿ ಹಾಗೂ ಚಿನ್ನ ಲೇಪಿತ ತಟ್ಟೆಯಲ್ಲಿ ಊಟೋಪಚಾರ ಮಾಡಲು ತಯಾರಿ ನಡೆದಿದೆ.

ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕಲಾತ್ಮಕ ಕೆತ್ತನೆಯ ವಿನ್ಯಾಸಗಳಿರುವ ಕೆಲವು ಬೆಳ್ಳಿಯ ಪಾತ್ರೆ ಹಾಗೂ ತಟ್ಟೆಗಳನ್ನೇ ಬಳಸಲು ನಿರ್ಧರಿಸಲಾಗಿದೆ. G-20 ಶೃಂಗಸಭೆಯ ವೇಳೆಯ ಊಟೋಪಚಾರ ಹಾಗೂ  ವಿದೇಶಿ ಅತಿಥಿಗಳು  ತಂಗುವ ಹೋಟೆಲ್‌ಗಳಲ್ಲಿ ಈ ಪಾತ್ರೆಗಳ ಬಳಕೆಯಾಗಲಿದೆ.

ಜಿ20 ಶೃಂಗಸಭೆಯ ಅತಿಥಿಗಳಿಗಾಗಿ ಈ ವಿಶೇಷ ಪಾತ್ರೆಗಳನ್ನು ತಯಾರಿಸಲಾಗಿದೆ. 200 ಕುಶಲಕರ್ಮಿಗಳು ಸುಮಾರು 15,000 ಬೆಳ್ಳಿ ವಸ್ತುಗಳನ್ನು ತಯಾರಿಸಿದ್ದಾರೆ. ಹೆಚ್ಚಿನ ಪಾತ್ರೆಗಳು ಸ್ಟೀಲ್ ಹಾಗೂ ಹಿತ್ತಾಳೆಯ ತಳವನ್ನು ಜೊತೆಗೆ ಬೆಳ್ಳಿಯ ಲೇಪನವನ್ನು ಹೊಂದಿದೆ. ಸ್ವಾಗತ ಪಾನೀಯಗಳನ್ನು ನೀಡಲು ಬಳಸುವ ಗ್ಲಾಸ್‌ಗಳನ್ನು ಇಡಲು ಬಳಸುವ ಪ್ಲೇಟ್‌ಗಳು ಚಿನ್ನದ ಲೇಪನವನ್ನು ಹೊಂದಿದೆ.

ಜಿ20 ಶೃಂಗಸಭೆಯ ಉಟೋಪಚಾರದಲ್ಲಿ ಬಳಸಲಾಗುತ್ತಿರುವ ಪಾತ್ರೆಗಳ ಮೇಲಿನ ಕೆತ್ತನೆ ಅತಿ ಸೂಕ್ಷ್ಮ ವಿವರಗಳನ್ನು ಹೊಂದಿದೆ. ಇದನ್ನು ಕರ್ನಾಟಕ, ಜೈಪುರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳ ಕುಶಲಕರ್ಮಿಗಳು ತಯಾರಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version