ಗಡ್ಡಧಾರಿಗಳಿಗೆ ಸಿಹಿ ಸುದ್ದಿ: ಮುಂದಿನ ಅವಧಿಯಲ್ಲಿ ನೀವೂ ಸಿಎಂ ಆಗುವ ಸಾಧ್ಯತೆ ಇದೆ! - Mahanayaka
3:19 AM Sunday 14 - September 2025

ಗಡ್ಡಧಾರಿಗಳಿಗೆ ಸಿಹಿ ಸುದ್ದಿ: ಮುಂದಿನ ಅವಧಿಯಲ್ಲಿ ನೀವೂ ಸಿಎಂ ಆಗುವ ಸಾಧ್ಯತೆ ಇದೆ!

mylara
01/08/2021

ಬಳ್ಳಾರಿ: ಯಡಿಯೂರಪ್ಪನವರ ನಂತರ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಇದೀಗ ಸ್ವಾಮೀಜಿಯೋರ್ವರು, ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಪೂರ್ಣಗೊಳಿಸುವುದಿಲ್ಲ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.


Provided by

ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪ ಒಡೆಯರ್ ಅವರ ಭವಿಷ್ಯದ ಪ್ರಕಾರ, ಮುಂದಿನ 6-7 ತಿಂಗಳ ಕಾಲ ಬಸವರಾಜ್ ಬೊಮ್ಮಾಯಿ ಅಧಿಕಾರದಲ್ಲಿರಲಿದ್ದಾರೆ. ಆ ಬಳಿಕ ಗಡ್ಡಧಾರಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಮೈಲಾರ ಅವರ ಭವಿಷ್ಯದಿಂದಾಗಿ ಇದೀಗ ಗಡ್ಡಧಾರಿಗಳು ಗಡ್ಡನೇವರಿಸಿಕೊಂಡು ನಾನೂ ಮುಖ್ಯಮಂತ್ರಿಯಾಗುತ್ತೇನಾ? ಎಂದು ಯೋಚಿಸುವಂತೆ ಮಾಡಿದೆ. ಇವರ ಭವಿಷ್ಯವಾಣಿ ನಿಜವಾದರೆ, ಈ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಾಲ್ಕು ಜನರು ಮುಖ್ಯಮಂತ್ರಿಗಳಾದಂತಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.ಇದರ ಜೊತೆಗೆ ಗಡ್ಡಧಾರಿ ರಾಜಕಾರಣಿಗಳನ್ನು ಅನುಮಾನದಿಂದ ನೋಡುವಂತಾಗಿದೆ.

ಇನ್ನಷ್ಟು ಸುದ್ದಿಗಳು…

“ಕಸವು ಕಸದ ಬುಟ್ಟಿಗೆ ಸೇರಿತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆ ಹಿನ್ನೆಲೆ ಪರ-ವಿರೋಧ ಚರ್ಚೆ!

ಆಸ್ತಿ ವಿವಾದ ಬಗೆಹರಿಸಲು ಬಂದ ಕೌನ್ಸಿಲರ್, ಎಸ್ ಐಯನ್ನು ಅಟ್ಟಾಡಿಸಿ ಹೊಡೆದ ಮಹಿಳೆ | ವಿಡಿಯೋ ವೈರಲ್

ನೀರಿಗೆ ಇಳಿಯಬೇಡಿ ಅಂದ್ರೂ ಇಳಿದರು… | ಸಮುದ್ರದಲ್ಲಿ ಮುಳುಗಿದ ನಾಲ್ವರ ಪೈಕಿ ಓರ್ವಳು ನೀರುಪಾಲು

ನಟಿ ಶಕೀಲ ಸಾವಿನ ಸುಳ್ಳು ಸುದ್ದಿ ಹರಡಿದ ಯುವಕನಿಗೆ ಅವರು ಹೇಳಿದ್ದೇನು ಗೊತ್ತಾ?

ಉನ್ನಾವೋ ಸಂತ್ರಸ್ತೆಯ ಅಪಘಾತ ಪ್ರಕರಣ: ದೂರುದಾರರ ಆಕ್ಷೇಪಣೆ ರೋಮಾಂಚಕ ಕತೆಯಂತಿವೆ | ದೆಹಲಿ ನ್ಯಾಯಾಲಯ

ಇತ್ತೀಚಿನ ಸುದ್ದಿ