“ಗಾಡಿ ಜೊತೆ ನನ್ ಹೆಂಡ್ತಿ ಮಕ್ಳನ್ನೂ ಸೀಝ್ ಮಾಡಿ…”
ಬೆಂಗಳೂರು: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಆದರೆ, ವೀಕೆಂಡ್ ಕರ್ಫ್ಯೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ.
ಭಾನುವಾರದಂದು ಚಿಕನ್ ಖರೀದಿಸಲು ಮಂಜುನಾಥ್ ಎಂಬವರು ಆಗಮಿಸಿದ್ದು, ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರ ಜೊತೆಗೆ ವಾದಿಸಿದ ಅವರು, ತರಕಾರಿ ಖರೀದಿಸಲು ಅವಕಾಶ ಇದೆ. ಮಾಂಸ ಖರೀದಿಸಲು ಕೂಡ ಅವಕಾಶ ಕೊಡಿ ಎಂದು ಹೇಳಿದ್ದಾರೆ.
ಆದರೆ, ಮಂಜುನಾಥ್ ಅವರ ವಾದವನ್ನು ಪೊಲೀಸರು ಒಪ್ಪದೇ ಬೈಕ್ ಸೀಝ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ತೀವ್ರ ಆಕ್ರೋಶ ಹೊರ ಹಾಕಿದ ಮಂಜುನಾಥ್, ಗಾಡಿ ಮಾತ್ರ ಯಾಕೆ ಸೀಝ್ ಮಾಡ್ತೀರಿ, ಮನೆಗೆ ಹೋಗಿ ಹೆಂಡ್ತಿ ಮಕ್ಳನ್ನು ಕರ್ಕೊಂಡು ಬರ್ತೇನೆ ಎಲ್ಲರನ್ನೂ ಒಟ್ಟಿಗೆ ಸೀಝ್ ಮಾಡಿ ಎಂದು ಹೇಳಿದ್ದಾರೆ.
ಮಂಜುನಾಥ್ ಆಕ್ರೋಶ ಕೇಳಿ ಕೊನೆಗೆ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
“ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸ್ಬೇಕು ಹೋಗಲು ಬಿಡಿ ಸರ್…”
ಮಂಗಳೂರು: ದೈವ ನಿಂದನೆಯ ಮತ್ತೊಂದು ವಿಡಿಯೋ ವೈರಲ್!
ನರ್ಸ್ ಗೆಟಪ್ ನಲ್ಲಿ ಬಂದು ಮಗುವನ್ನು ಕದ್ದೊಯ್ದ ಮಹಿಳೆ
31ನೇ ವಯಸ್ಸಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ ನಟಿ: ಅಭಿಮಾನಿಗಳಿಗೆ ಶಾಕ್
ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಖರ್ಗೆ