ಗಡಿ ವಿವಾದ: ಸಿಎಂ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರದಲ್ಲಿ ಖಂಡನಾ ನಿರ್ಣಯ
ಬೆಳಗಾವಿ,: ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಗಡಿ ವಿವಾದದ ಕುರಿತಂತೆ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಶಿವಸೇನೆ ಸರ್ಕಾರವು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿರುವ ಬಗ್ಗೆ ವರದಿಯಾಗಿದೆ.
ಶಿವಸೇನೆ ಶಾಸಕ ದಿವಾಕರ್ ರಾವುಟೆ ವಿಷಯ ಪ್ರಸ್ತಾಪಿಸಿ, ಅಕ್ಕಲಕೋಟೆ ಮತ್ತು ಸೊಲ್ಲಾಪುರದಂತಹ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, ಬೆಳಗಾವಿ, ಕಾರವಾರ ಮತ್ತು ನೆರೆಯ ಪ್ರದೇಶಗಳು ಕರ್ನಾಟಕಕ್ಕೆ ಸಲ್ಲುತ್ತವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದರೆ ಅವರ ಈ ಹೇಳಿಕೆ ಅಹಿತವಾಗಿದ್ದು, ಅವರ ವಿರುದ್ದ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭಾಪತಿ ರಾಮರಾಜೇ ನಾಯ್ಕ್ ನಿಂಬಾಳ್ಕರ್ ಪ್ರತಿಕ್ರಿಯಿಸಿ, ಬೊಮ್ಮಾಯಿ ಹೇಳಿಕೆ ಖಂಡನೀಯ. ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದು, ಇಂತಹ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಬಾರದಿತ್ತು ಎಂದು ತಿಳಿಸಿದರು. ಬಳಿಕ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅತಿಥಿ ಶಿಕ್ಷಕಿಯ ಮೃತದೇಹ ಮಠದ ಬಾವಿಯಲ್ಲಿ ಪತ್ತೆ
ಪಾವಗಡ ಬಸ್ ಅಪಘಾತ ಪ್ರಕರಣ: 7ಕ್ಕೆ ಏರಿಕೆಯಾದ ಮೃತರ ಸಂಖ್ಯೆ
ಮಗುವಿನ ಗ್ರಹಗತಿ ಸರಿಯಿಲ್ಲ ಎಂದು ಜಲಾಶಯಕ್ಕೆ ಎಸೆದುಕೊಂದ ಪಾಪಿ ತಾಯಿ!
ನನ್ನನ್ನು ಜೈಲ್‌ಗೆ ಕಳುಹಿಸಲು ಬಿಜೆಪಿ ಕೆಟ್ಟದಾರಿ ಹಿಡಿಯುತ್ತಿದೆ: ಉದ್ಧವ್ ಠಾಕ್ರೆ