ಭದ್ರಾ ಬ್ಯಾಕ್ ವಾಡರ್ ನಲ್ಲಿ ಗಜಪಡೆ ರೌಂಡ್ಸ್: 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು

10/02/2025
ಚಿಕ್ಕಮಗಳೂರು: ಭದ್ರಾ ಬ್ಯಾಕ್ ವಾಡರ್ ನಲ್ಲಿ ಗಜಪಡೆ ರೌಂಡ್ಸ್ ಹಾಕುತ್ತಿದ್ದು, ಭದ್ರಾ ನದಿ ಹಿನ್ನೀರಿನಲ್ಲಿ 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿವೆ.
ಭದ್ರಾ ಅಭಯಾರಣ್ಯದಿಂದ ಆನೆಗಳ ಹಿಂಡು ಬಂದಿರೋ ಸಾಧ್ಯತೆಯಿದೆ. ಹುಲಿಸಂರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರೋ ಭದ್ರಾ ನದಿಯಲ್ಲಿ ಎನ್.ಆರ್.ಪುರ ತಾಲೂಕಿನ ವಿಠಲ ಗ್ರಾಮ ಸಮೀಪವೇ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ.
ಎನ್.ಆರ್.ಪುರದಲ್ಲಿ 2 ತಿಂಗಳಲ್ಲಿ ಮೂವರನ್ನ ಕಾಡಾನೆ ಬಲಿ ಪಡೆದಿದೆ. ನಿರಂತರವಾಗಿ ಭದ್ರಾ ಹಿನ್ನೀರಿನಲ್ಲಿ ಕಾಡಾನೆ ಹಿಂಡು ಕಾಣಸಿಕೊಳ್ಳುತ್ತಿದೆ.
ಗಂಟೆಗಟ್ಟಲೇ ನದಿಯ ತೀರದಲ್ಲಿ ರೌಂಡ್ಸ್ ಹಾಕಿದ ಗಜಪಡೆಯನ್ನು ಕಂಡು ಭದ್ರಾ ಬ್ಯಾಕ್ ವಾಟರ್ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: