ಗಜಪಡೆ ಶೋಧ ನಡೆಸಿದರೂ ಸಿಗದ ಚಿರತೆ: 250 ಎಕರೆ ಪ್ರದೇಶಗಳಲ್ಲಿ ಶೋಧ
ಬೆಳಗಾವಿ: ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಚಿರತೆಯನ್ನು ಹಿಡಿಯಲು ಬೆಳಗಾವಿಗೆ ಗಾಲ್ಪ್ ಮೈದಾನದಲ್ಲಿ ಆನೆಗಳನ್ನು ಬಳಸಿ 250 ಎಕರೆ ಪ್ರದೇಶಗಳಲ್ಲಿ ಶೋಧ ನಡೆಸಲಾಯಿತು.
2 ಆನೆ ಬಳಸಿ ಮಧ್ಯಾಹ್ನ 12:30ರಿಂದ ಗಜಪಡೆ ಶೋಧ ಕಾರ್ಯ ನಡೆಸಿತ್ತು. ಆನೆ ಬಳಸಿ 7 ಕಿ.ಮೀ. ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಲಾಗಿತ್ತು. ಶೋಧದ ವೇಳೆ ಚಿರತೆ ಹಂದಿಯನ್ನು ಬೇಟೆಯಾಡಿ ಅರ್ಧ ತಿಂದು ಹಾಕಿ ಹೋಗಿರುವುದು ಪತ್ತೆಯಾಗಿದೆ. ಆದರೆ, ಚಿರತೆ ಪತ್ತೆ ಇನ್ನೂ ಸಾಧ್ಯವಾಗಿಲ್ಲ.
ಚಿರತೆ ಪತ್ತೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಚಿರತೆ ಹಿಡಿಯಲು ಸರಿಯಾದ ಯೋಜನೆ ರೂಪಿಸದೇ ಕಾರ್ಯಾಚರಣೆಗೆ ಇಳಿದಿದ್ದರಿಂದಾಗಿ ಸಿಬ್ಬಂದಿಯ ಎದುರೇ ಚಿರತೆ ಓಡಿ ಹೋಗಿತ್ತು. ಇಂದು ಕೂಡ ಚಿರತೆ ಸಿಗದ ಹಿನ್ನೆಲೆಯಲ್ಲಿ ನಾಳೆಯೂ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka