ಸಣ್ಣ ವಿಚಾರಕ್ಕಾಗಿ ಅಂಗಡಿಯ ಬಾಗಿಲನ್ನೇ ಮುರಿದ ಗಜರಾಜ!

ಚಾಮರಾಜನಗರ: ಚಾಮರಾಜನಗರದ ಪುಣಜನೂರು ತಮಿಳುನಾಡಿನ ಅಸನೂರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿ ವಾಹನ ಅಡ್ಡಗಟ್ಟುತ್ತಿದ್ದ ಕಾಡಾನೆ ದಿನಸಿ ಅಂಗಡಿಯ ಬಾಗಿಲು ಮುರಿದು ಬಾಳೆಗೊನೆ ಕದ್ದಿರುವ ಘಟನೆ ತಮಿಳುನಾಡಿನ ಅಸನೂರಲ್ಲಿ ನಡೆದಿದೆ.
ಅಸನೂರಿನ ವೆಂಕಟೇಶ್ ಎಂಬವರ ದಿನಸಿ ಅಂಗಡಿಯ ಶಟರ್ ಮುರಿದ ಆನೆಯೊಂದು ಬಾಳೆಗೊನೆ ಎತ್ತಿಕೊಂಡು ತಿಂದಿದೆ. ಜೊತೆಗೆ, ಟೊಮೆಟೊ ತರಕಾರಿಯನ್ನು ತಿಂದಿದೆ.
ಆನೆ ದಾಳಿಯಿಂದ ಎಚ್ವೆತ್ತ ಜನರು ಕಿರುಚಾಡಿ ಆನೆಯನ್ನು ಓಡಿಸಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದು ಸಿಸಿಟಿವಿಯಲ್ಲೂ ಆನೆ ದಾಂಧಲೆ ಸೆರೆಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw