ಗಾಜಿನ ಗೋಲಿ ನುಂಗಿ ಒಂದು ವರ್ಷ ವಯಸ್ಸಿನ ಮಗು ಸಾವು!

manveer
14/07/2021

ವಿಜಯಪುರ: ಆಟವಾಡುತ್ತಿದ್ದಾಗ ಗಾಜಿನ ಗೋಲಿ ನುಂಗಿ ಒಂದು ವರ್ಷ ವಯಸ್ಸಿನ ಮಗುವೊಂದು ಮೃತಪಟ್ಟ ಘಟನೆ ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದಲ್ಲಿ ನಡೆದಿದೆ.

ಮನೆಯ ಮುಂದಿರುವ ಜಾಗದಲ್ಲಿ ಆಟವಾಡುತ್ತಿದ್ದ ವೇಳೆ ಕೈಗೆ ಸಿಕ್ಕಿದ ಗೋಲಿಯೊಂದನ್ನು  ಮಗು ನುಂಗಿದ್ದು, ಮಗು ಅಸ್ವಸ್ಥಗೊಂಡಿರುವುದನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಯತ್ನಿಸಿದ್ದಾರೆ. ಆದರೆ ಮಗು ಆಗಲೇ ಉಸಿರುಗಟ್ಟಿ ಸಾವನ್ನಪ್ಪಿದೆ.

ಮಗು ಪ್ರತೀ ದಿನ ಗೋಲಿ ಇನ್ನಿತರ ವಸ್ತುಗಳ ಜೊತೆಗೆ ಆಟವಾಡುತ್ತಿತ್ತು. ಆದರೆ, ಈ ಬಾರಿಯೂ ಮಗು ಗೋಲಿಯನ್ನು ನುಂಗಿರುವುದನ್ನು ಅಲ್ಲಿಯೇ ಇದ್ದ ಬಾಲಕ ನೋಡಿ ಪಾಲಕರಿಗೆ ಹೇಳಿದ್ದು,  ಪಾಲಕರು ಮಗುವನ್ನು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗು ಸಾವನ್ನಪ್ಪಿದೆ.

ಇನ್ನಷ್ಟು ಸುದ್ದಿಗಳು:

ಅಜ್ಜನ ಕೈ ಬಿಡಿಸಿಕೊಂಡು ರಸ್ತೆಗೆ ಓಡಿದ 5ರ ಬಾಲಕಿ | ಕೆಲವೇ ಕ್ಷಣದಲ್ಲಿ ನಡೆದಿತ್ತು ಅನಾಹುತ!

ಹಾಸಿಗೆ ಹಿಡಿದಿದ್ದ ತಂದೆಯನ್ನು ಥಳಿಸಿ ಮನೆಯಿಂದ ಹೊರ ದಬ್ಬಿದ ಮಗ!

ಶೀತ-ನೆಗಡಿಯಿಂದ 3 ಮಕ್ಕಳು ಸಾವು, 14 ಮಂದಿ ಗಂಭೀರ | ಬಂದೇ ಬಿಟ್ಟಿತೇ 3ನೇ ಅಲೆ?

ಲೋನ್ ಬೇಕಾದ್ರೆ ಲೈಂಗಿಕ ಆಸೆ ತೀರಿಸ್ಬೇಕು: ವಿಡಿಯೋ ವೈರಲ್ ಬಳಿಕ ಬಯಲಾಯ್ತು ಬ್ಯಾಂಕ್ ಮ್ಯಾನೇಜರ್ ನ ಅಸಲಿ ಮುಖ

ಇತ್ತೀಚಿನ ಸುದ್ದಿ

Exit mobile version