ದೇಶದಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆ, ಗಲಾಟೆಗೆ ಆರೆಸ್ಸೆಸ್ ಕಾರಣ: ಶಾಸಕ ಅಮರೇಗೌಡ ಬಯ್ಯಾಪುರ
ಗಂಗಾವತಿ: ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆ, ಗಲಾಟೆಗೆ ಆರೆಸ್ಸೆಸ್ ಮೂಲ ಕಾರಣ ಎಂದು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ ನೀಡಿದ್ದಾರೆ.
ತಾಲೂಕಿನ ಆನೆಗೊಂದಿ ಸಮೀಪದ ಪಂಪ ಸರೋವರಕ್ಕೆ ಭೇಟಿ ನೀಡಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹಿಜಾಬ್ ಮಸೀದಿ, ಮೈಕ್ ಬಳಕೆಯ ವಿವಾದಗಳು ಆರಂಭಿಸಲಾಗಿದೆ. ಮೈಕ್ ಸಮಸ್ಯೆಯೇ ಅಲ್ಲ. ಯಾಕೆಂದರೆ, ದೇವಸ್ಥಾನಗಳಲ್ಲಿಯೂ ಮೈಕ್ ಬಳಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಡಿಜೆ ಬಳಸುತ್ತಾರೆ ಎಂದರು.
ಪ್ರತಿಯೊಂದು ವಿಚಾರದಲ್ಲಿಯೂ ಕೋಮುಪ್ರೇರಿತ ದ್ವೇಷಕ್ಕೆ ಅವಕಾಶ ನೀಡಬಾರದು. ಮುಂದಿನ ದಿನಗಳಲ್ಲಿ ಮೋದಿ ಆ್ಯಂಡ್ ಟೀಮ್ ನ್ನು ಸೋಲಿಸುವ ಮೂಲಕ ಬಿಜೆಪಿ ಮೂಲೆಗುಂಪಾಗಲಿದೆ ಎಂದು ಅವರು ಇದೇ ವೇಳೆ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಕಮ್ಯುನಿಸ್ಟರನ್ನು ಕೆರಳಿಸಿದ ಎಸ್ ಡಿಪಿಐ ಮುಖಂಡ ಇಲ್ಯಾಸ್ ಹೇಳಿಕೆ
ಹಾಡು ಕೊನೆಗೊಳಿಸುತ್ತಿದ್ದಂತೆಯೇ ವೇದಿಕೆಯಲ್ಲೇ ಪ್ರಾಣ ಬಿಟ್ಟ ಖ್ಯಾತ ಗಾಯಕ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿರ್ಮಾಪಕ ಭಾ.ಮಾ.ಹರೀಶ್ ಆಯ್ಕೆ
ವೆಸ್ಟ್ ನೈಲ್ ಜ್ವರ ವ್ಯಕ್ತಿ ಸಾವು: ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ
19 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ