ಗಲಭೆ ಸೃಷ್ಟಿಸಲು ಮುಂದಾದರೆ, ಸಂವಿಧಾನ ಬದ್ಧವಾಗಿ ತಡೆಯಲು ಸಿದ್ಧ | ಸಂಘಪರಿವಾರಕ್ಕೆ ಪಿಎಫ್ ಐ ತಿರುಗೇಟು - Mahanayaka
3:17 AM Thursday 19 - September 2024

ಗಲಭೆ ಸೃಷ್ಟಿಸಲು ಮುಂದಾದರೆ, ಸಂವಿಧಾನ ಬದ್ಧವಾಗಿ ತಡೆಯಲು ಸಿದ್ಧ | ಸಂಘಪರಿವಾರಕ್ಕೆ ಪಿಎಫ್ ಐ ತಿರುಗೇಟು

popular front of india
16/08/2021

ಪುತ್ತೂರು: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮಾಡುವ ನೆಪದಲ್ಲಿ ಕೊವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸಂಘಪರಿವಾರದ ಹಿಡನ್ ಅಜೆಂಡಾಗಳನ್ನು ಈಡೇರಿಸಲು  ಕಬಕ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಅಧ್ಯಕ್ಷರು ಪಂಚಾಯತ್ ಸದಸ್ಯರ ಗಮನಕ್ಕೆ ತಾರದೇ ಏಕಪಕ್ಷೀಯವಾಗಿ  ನಿಲುವು ತೆಗೆದುಕೊಂಡು ಹೇಡಿ ಸಾರ್ವರ್ಕರ್ ಚಿತ್ರವನ್ನು ಸ್ವಾತಂತ್ರ್ಯ ರಥದಲ್ಲಿ ಹಾಕಿರುವುದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಕಡಬದಲ್ಲಿ ಸ್ವಾತಂತ್ರ್ಯ ರಥ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ ಐ) ಹೇಳಿದೆ

ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಪಿಎಫ್ ಐ ಮುಖಂಡ ಜಾಬಿರ್ ಅರಿಯಡ್ಕ,  ಕಡಬದಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಪುತ್ತೂರಿನಲ್ಲಿ ಗಲಭೆ ಸೃಷ್ಟಿಸಲು ಸರ್ಕಾರಿ ವಾಹನಗಳನ್ನು ದುರುಪಯೋಗ ಪಡಿಸಿಕೊಂಡಿದ್ದು, ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ, ಸ್ವಾತಂತ್ರ್ಯ ರಥವನ್ನು ಸ್ವಾಗತಿಸುವ ನೆಪದಲ್ಲಿ ಗಾಂಧಿ ಕಟ್ಟೆಯ ಬಳಿ ಪೊಲೀಸ್  ಅಧಿಕಾರಿಗಳ ಸಮ್ಮುಖದಲ್ಲಿಯೇ ಅವಹೇಳನಕಾರಿ ಘೋಷಣೆ ಕೂಗಿ, ಸಂಘರ್ಷಕ್ಕೆ ಆಹ್ವಾನ ನೀಡಿದ್ದು, ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಹಿಂದೂ ಮಹಿಳೆಯ ಪಾರ್ಥಿವ ಶರೀರವನ್ನು ಸ್ವಕ್ಷೇತ್ರ ವ್ಯಾಪ್ತಿಯಲ್ಲಿ ಅಂತ್ಯ ಕ್ರಿಯೆ ನಡೆಸಲು  ಬಿಡದೇ ಅಡ್ಡಿಪಡಿಸಿ, ಊರೂರು ಸುತ್ತಾಡಿಸಿದ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿಯಂತಹ ಶಾಸಕರು ಮತ್ತು ಬಿಜೆಪಿ ಜನ ಪ್ರತಿನಿಧಿಗಳು, ಗಾಂಧೀಜಿಯನ್ನು ಕೊಂದ ಆರೋಪಿ ಹಾಗೂ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದ ಹೇಡಿ ಸಾರ್ವರ್ಕರ್ ನ್ನು ದೇಶಪ್ರೇಮಿಯಂತೆ ಚಿತ್ರೀಕರಿಸುತ್ತಿರುವುದು ಹಾಸ್ಯಾಸ್ಪದ ಮತ್ತು ದೇಶದ್ರೋಹಿ ಕೃತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.


Provided by

ದೇಶಕ್ಕಾಗಿ ತನ್ನ ಎರಡು ಮಕ್ಕಳನ್ನು ಒತ್ತೆಯಿಟ್ಟ ಟಿಪ್ಪು ಸುಲ್ತಾನ್ ರನ್ನು ದೇಶದ್ರೋಹಿಯಂತೆ ಚಿತ್ರಿಸುತ್ತಿರುವುದು ಖಂಡನಾರ್ಹವಾಗಿದೆ. ಬಿಜೆಪಿ, ಸಂಘಪರಿವಾರದ ನಾಯಕರು, ಜನಪ್ರತಿನಿಧಿಗಳು ಬಹಿರಂಗವಾಗಿ ಸಂಘರ್ಷಕ್ಕೆ ಆಹ್ವಾನ ನೀಡಿ, ಪುತ್ತೂರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ಪೊಲೀಸ್ ಇಲಾಖೆ ಮೂಕ ಪ್ರೇಕ್ಷಕರಾಗಿ ನೋಡುತ್ತಿರುವುದು ವಿಪರ್ಯಾಸವಾಗಿದೆ ಎಂದ ಅವರು, ಸಂಘಪರಿವಾರವು ನೀಚ ಸಂಸ್ಕೃತಿಯನ್ನು ಮುಂದುವರಿಸಿದರೆ, ಅದನ್ನು ಸಂವಿಧಾನ ಬದ್ಧವಾಗಿ ಯಾವುದೇ ರೀತಿಯಲ್ಲಿ ತಡೆಗಟ್ಟಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸನ್ನದ್ಧವಾಗಿದೆ ಎಂದು ಜಾಬಿರ್ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು

ನಾಳೆಯೇ ಬಿಜೆಪಿಗೆ ರಾಜೀನಾಮೆ ನೀಡುತ್ತಾರಾ ಆನಂದ್ ಸಿಂಗ್? | ಬೊಮ್ಮಾಯಿ ಹಚ್ಚಿದ ಮುಲಾಮು ಫಲಕೊಡಲಿಲ್ಲವೇ?

ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್

ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದೊಳಗೆ ಮೊಬೈಲ್ ಬಳಕೆ ನಿಷೇಧ | ಕಾರಣ ಏನು ಗೊತ್ತಾ?

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶಕ್ಕೆ | ಕಾಬುಲ್ ಗೆ ಪ್ರವೇಶಿಸಿ ವಶಕ್ಕೆ ಪಡೆದುಕೊಂಡ ಉಗ್ರರು

ಸಿದ್ದರಾಮಯ್ಯನವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂದ ಸಿ.ಟಿ.ರವಿ

ಸ್ವಾತಂತ್ರ್ಯ ದಿನಾಚರಣೆ: ಗಾಂಧಿ, ಭಗತ್ ಸಿಂಗ್, ಅಂಬೇಡ್ಕರರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ

ಇತ್ತೀಚಿನ ಸುದ್ದಿ