ಕ್ಲಾಸ್ ನಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಯ ಕಣ್ಣಿಗೆ ಪೆನ್ ಎಸೆದ ಶಿಕ್ಷಕಿಗೆ ಜೈಲು! - Mahanayaka

ಕ್ಲಾಸ್ ನಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಯ ಕಣ್ಣಿಗೆ ಪೆನ್ ಎಸೆದ ಶಿಕ್ಷಕಿಗೆ ಜೈಲು!

kerala news
01/10/2021

ತಿರುವನಂತಪುರಂ: ತರಗತಿಯಲ್ಲಿ ಗಲಾಟೆ ಮಾಡಿದಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಪೆನ್ ಎಸೆದಿದ್ದು, ಪೆನ್ ನೇರವಾಗಿ ವಿದ್ಯಾರ್ಥಿಯ ಕಣ್ಣಿಗೆ ತಾಗಿದ್ದು, ಪರಿಣಾಮವಾಗಿ ವಿದ್ಯಾರ್ಥಿ ದೃಷ್ಟಿ ಕಳೆದುಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತ ಶಿಕ್ಷಕಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

ಕೇರಳದ ತಿರುವನಂತಪುರಂ ಪೋಕ್ಸೊ ನ್ಯಾಯಾಲಯ ಈ ಆದೇಶವನ್ನು ನೀಡಿದೆ. ತುಂಗಂಪರಾ ನಿವಾಸಿ ಶೆರಿಫ್ ಶಹಜಹಾನ್  ಶಿಕ್ಷೆಗೊಳಗಾಗಿರುವ ಶಿಕ್ಷಕಿಯಾಗಿದ್ದಾರೆ. ಇಲ್ಲಿನ ಕಂದಾಲ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿರುವ ಇವರು, ಅರೆಬಿಕ್ ಕ್ಲಾಸ್ ನಡೆಸುತ್ತಿದ್ದ ವೇಳೆ, ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು ಕಂಡು ಆತನಿಗೆ ಪೆನ್ ನಿಂದ ಎಸೆದಿದ್ದರು. ಆ ಪೆನ್ ವಿದ್ಯಾರ್ಥಿಯ ಕಣ್ಣಿಗೆ ತಾಗಿತ್ತು.

2005 ಜನವರಿ 18ರಂದು ಈ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟವಾಗಿದೆ. ಶಿಕ್ಷಕಿ ಎಸೆದ ಪೆನ್ ಕಣ್ಣಿಗೆ ತಾಗಿದ್ದರಿಂದ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದ. ವಿದ್ಯಾರ್ಥಿಗೆ ಮೂರು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿದರೂ ಆತನ ದೃಷ್ಟಿ ಮರಳಿ ಬರಲಿಲ್ಲ.

ತೀರ್ಪು ನೀಡು ವೇಳೆ, ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದ ಶಿಕ್ಷಕರ ಈ ನಡವಳಿಕೆ ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಧೀಶರು ಹೇಳಿದರು.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

BSPಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು | ಕಾರ್ಯಕರ್ತರ ಸಮಾವೇಶದಲ್ಲಿ ರಾಮ್ಜೀ ಗೌತಮ್ ಕರೆ

ಸೊಸೆಗೆ ಚಾಕುವಿನಿಂದ ಚುಚ್ಚಿದ ಅತ್ತೆ: ಸೊಸೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಅತ್ತೆ ನೇಣಿಗೆ ಶರಣು

ಕೂದಲು ಉದುರುವಿಕೆ, ಎದೆ ಉರಿ ಸೇರಿದಂತೆ ಹಲವು ರೋಗಗಳ ನಿವಾರಣೆ ಅಲೋವೆರಾ ಉತ್ತಮ

ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ | ಐವರು ಅರೆಸ್ಟ್

ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲ್ಲ ಅನ್ನೋದು ಅಸತ್ಯ, ಭಟ್ಟಂಗಿತನ: ಕನ್ಹಯ್ಯ ಕುಮಾರ್ ವಿರುದ್ಧ ನಟ ಚೇತನ್ ಆಕ್ರೋಶ

ತಮ್ಮ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಿದ ಪಂಜಾಬ್ ನ ಮಾಜಿ ಸಿಎಂ ಅಮರೀಂದರ್ ಸಿಂಗ್!

ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯಿಂದ ಅಂಬೇಡ್ಕರ್ ಅವರ ಜೀವನ ಕುರಿತ ಹಾಡು ಬಿಡುಗಡೆ

ಇತ್ತೀಚಿನ ಸುದ್ದಿ