ಮಂಗಳೂರು: ಗಾಳಿಯ ರಭಸಕ್ಕೆ ಲಂಗರು ಹಾಕಿದ್ದ ಬೋಟುಗಳಿಗೆ ಹಾನಿ
ಮಂಗಳೂರು: ಸೋಮವಾರ ರಾತ್ರಿ ಮಂಗಳೂರಿನ ಹಲವೆಡೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ಹಾನಿಯಾಗಿ, ತಂತಿ ಕಂಬ ಬಿದ್ದು ಕಾರುಗಳಿಗೆ ಹಾನಿಯಾಗಿದೆ. ಮಂಗಳೂರಿನ ಹಳೆಯ ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟುಗಳ ಹಗ್ಗ ತುಂಡಾಗಿ ಹಲವಾರು ಬೋಟುಗಳ ಗಾಳಿಯ ವೇಗಕ್ಕೆ ಪಣಂಬೂರು ಮೀನಕಳಿ, ಚಿತ್ರಪುರ, ಸುರತ್ಕಲ್, ಸಸಿಹಿತ್ಲು ಸಮುದ್ರ ಕಿನಾರೆಗೆ ಬಂದು ನಿಂತ ಆತಂಕಕಾರಿ ಘಟನೆ ನಡೆದಿದೆ.
ನಿನ್ನೆ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಕೆಲವೆಡೆ ಸೋಮವಾರ ಮಧ್ಯಾಹ್ನ ಮತ್ತು ಸೋಮವಾರ ರಾತ್ರಿ ಭಾರೀ ಮಳೆಯಾಗಿತ್ತು. ಗಾಳಿ ವಿಪರೀತ ವೇಗವಾಗಿ ಬೀಸಿದ್ದು, ಪರಿಣಾಮವಾಗಿ ಲಂಗರು ಹಾಕಿದ್ದ ಬೋಟ್ ಗಳ ಹಗ್ಗ ತುಂಡಾಗಿ ಬೋಟ್ ಗಳು ಸಮುದ್ರದ ಕಿನಾರೆಗೆ ಬಂದು ನಿಂತಿವೆ.
ನಿನ್ನೆ ಸುರಿದ ಗುಡುಗು ಸಹಿತ ಗಾಳಿ ಮಳೆಯಿಂದಾಗಿ ನಗರದ ಕೃಷ್ಣನಗರದಲ್ಲಿ ಮಳೆಗೆ ಮನೆಯೊಂದಕ್ಕೆ ಹಾನಿ ಸಂಭವಿಸಿದೆ. ನಗರದ ಮುಳಿಹಿತ್ಲು ಬಳಿ ತಂತಿ ಕಂಬ ಬಿದ್ದು ಎರಡು ಕಾರಿಗೆ ಹಾನಿಯಾಗಿದೆ. ಬಂಟ್ವಾಳದ ಬೆಂಜನಪದವಿನಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಇನ್ನು ಹಲವೆಡೆಗಳಲ್ಲಿ ವಿವಿಧ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ವಶಪಡಿಸಿಕೊಂಡ ಮದ್ಯವನ್ನು ಇಲಿ ಹಾಳು ಮಾಡಿದೆ ಎಂದು ಹೇಳಿ ಸಿಕ್ಕಿ ಹಾಕಿಕೊಂಡ ಪೊಲೀಸರು!